ಕೆ.ಆರ್. ಪೇಟೆಯಲ್ಲಿ ಆತಂಕ!

ಕೆ.ಆರ್.ಪೇಟೆ : ಚೆಕ್ ಪೋಸ್ಟ್ ದಾಟುವ ಉದ್ಧೇಶದಿಂದ ಕಿಡಿಗೇಡಿಗಳು ನಮಗೆ ಕೊರೊನಾ ಬಂದಿದೆ. ನಮ್ಮನ್ನು ಮುಟ್ಟಿದರೆ, ನಿಮಗೂ ಬರುತ್ತದೆ ಎಂದು ಹೆದರಿಸಿ ಕೆ.ಆರ್.ಪೇಟೆ ಪಟ್ಟಣವನ್ನು ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಪ್ಯಾಸೆಂಜರ್ ಆಟೋದಲ್ಲಿ ಬಂದ ಮೂವರು ಮುಸ್ಲಿಂ ಯುವಕರು, ಕೆ.ಆರ್.ಪೇಟೆ ಪ್ರವೇಶಕ್ಕೆ ಮುಂದಾಗಿದ್ದಾರೆ. ಅವರನ್ನು ಚೆಕ್ ಪೋಸ್ಟ್ ನಲ್ಲಿ ಪೊಲೀಸರು ಪ್ರಶ್ನಿಸಲು ಮುಂದಾದಾಗ, ನಾವು ಹೋಮ್ ಕ್ವಾರಂಟೈನ್ ನಲ್ಲಿ ಇದ್ದೇವೆ. ನಮ್ಮನ್ನು ಮುಟ್ಟಬೇಡಿ ಎಂದು ಬೆದರಿಕೆ ಹಾಕಿ ಪಟ್ಟಣವನ್ನು ಪ್ರವೇಶಿಸಿದ್ದಾರೆ ಎಂದು ತಿಳಿದು ಬಂದಿದೆ.
ಪೊಲೀಸರು ಯುವಕರನ್ನು ಹಿಂಬಾಲಿಸಿದ್ದಾರೆ. ರಾತ್ರಿಯಾಗಿದ್ದರಿಂದ ಯುವಕರು ಎಲ್ಲಿ ಹೋಗಿದ್ದಾರೆ ಎಂದು ತಿಳಿದು ಬಂದಿಲ್ಲ.
ಸದ್ಯ ಕೆ.ಆರ್. ಪೇಟೆಯ ಎಲ್ಲ ಮಾರ್ಗಗಳನ್ನು ಬಂದ್ ಮಾಡಿದ್ದು, ಯುವಕರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದು, ಜಿಲ್ಲೆಯಾದ್ಯಂತ ಪೊಲೀಸರು ಸರ್ಪಗಾವಲು ಹಾಕಿದ್ದಾರೆ.

ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment