ಮುಲ್ಲಾ ಓಣಿಯ ಸೋಂಕಿತ ಅಣ್ಣನ ಟ್ರಾವೆಲ್ ಹಿಸ್ಟರಿ ಇದು..

ಹುಬ್ಬಳ್ಳಿ: ಹುಬ್ಬಳ್ಳಿಯ ಮುಲ್ಲಾ ಓಣಿಯ ಕೊರೊನಾ ಸೋಂಕಿತ ಅಣ್ಣನ ಟ್ರಾವೆಲ್ ಹಿಸ್ಟರಿ ಬೆಚ್ಚಿ ಬಿಳಿಸುವಂತಿದೆ.
ಪಿ.೧೯೪ನ ಅಣ್ಣ ಪಿ-೨೩೬ ಇಡೀ ಹುಬ್ಬಳ್ಳಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕು ಸುತ್ತಾಡಿದ್ದಾನೆ.
ಮಾ.೨೩ರಂದು ವಾಹನ ಚಾಲಕನ ಸಮೇತ ಯಲ್ಲಾಪುರಕ್ಕೆ ಪ್ರಯಾಣ ಬೆಳೆಸಿ, ಅಲ್ಲಿಂದ ತನ್ನ ಫುಟ್ ವೇರ ಅಂಗಡಿ ಓಪನ್ ಮಾಡಿದ್ದಾನೆ. ಅಂದೇ ಭಾರತ ಲಾಕ್ ಡೌನ್ ಮೊದಲದಿನವಾದ್ದರಿಂದ ವ್ಯಾಪಾರ ನಡೆಸಿದ್ದ.
ವ್ಯಾಪಾರ ಮುಗಿಸಿ ಐIಅ ಕಚೇರಿಗೆ ತೆರಳಿ ಪ್ರೀಮಿಯಂ ಭರಣ ಮಾಡಿದ್ದಾನೆ. ಅಲ್ಲಿಂದ ರಾತ್ರಿ ೮ಗಂಟೆಗೆ ಹುಬ್ಬಳ್ಳಿಗೆ ಪ್ರಯಾಣ ಮಾಡಿದ್ದಾನೆ. ಮಾ.೨೪ರಂದು ಬೆಳಗ್ಗೆ ಹುಬ್ಬಳ್ಳಿಯ ವಿವಿಧ ಪ್ರದೇಶಗಳಲ್ಲಿ ಪ್ರಯಾಣ ಮಾಡಿದ್ದಾನೆ.
ಹಳೇ ಹುಬ್ಬಳ್ಳಿಯಲ್ಲಿ ದಿನಸಿ, ಹಣ್ಣು, ಕಿರಾಣಿ ಸಾಮಾನು ಖರೀದಿಸಿ, ಬಳಿಕ ಇಂಡಿಪAಪ್, ಕೇಶ್ವಾಪುರ, ದುರ್ಗದಬೈಲ್ ಮಾರ್ಕೆಟ್ ಪ್ರದೇಶದಲ್ಲಿ ವಿವಿಧ ವಸ್ತುಗಳ ಖರೀದಿಗೆ ಸುತ್ತಾಡಿದ್ದಾನೆ. ಹೀಗಾಗಿ ಈತನ ಸಂಪರ್ಕದಲ್ಲಿರುವವರು ಹತ್ತಿರ ಆಸ್ಪತ್ರೆ ಅಥವಾ ಕಿಮ್ಸ್ ಗೆ ಭೇಟಿ ನೀಡಿ ಪರೀಕ್ಷೆ ಮಾಡಿಸಿಕೊಳ್ಳಲು ಜಿಲ್ಲಾಡಳಿತ ಮನವಿ ಮಾಡಿದೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಹುಬ್ಬಳ್ಳಿ

Please follow and like us:

Related posts

Leave a Comment