ತುತ್ತು ಅನ್ನಕ್ಕಾಗಿ ಪರಿತಪಿಸುತ್ತಿರುವ ಅಲೆಮಾರಿ ಕುಟುಂಬಗಳು..

ಮಸ್ಕಿ: ಕೊರೊನಾ ಮಹಾಮಾರಿಯ ಹಾವಳಿಯಿಂದಾಗಿ ಅಲೆಮಾರಿ ಜನಾಂಗದವರ ಬದುಕು ಬೀದಿಗೆ ಬಂದಿದೆ. ಅನ್ನ-ಆಹಾರವಿಲ್ಲದೆ ಮಕ್ಕಳು, ಮಹಿಳೆಯರು, ವೃದ್ಧರು ಪಡಬಾರದ ಪರಿಪಾಟಲು ಪಡ್ತಿದ್ದಾರೆ.
ಹೌದು ರಾಯಚೂರು ಜಿಲ್ಲೆ ಮಸ್ಕಿ ಪಟ್ಟಣದ ಗಾಂಧಿನಗರದಲ್ಲಿ ೧೨೦ ಅಲೆಮಾರಿ ಕುಟುಂಬಗಳು ಇವೆ.
ಈ ಜನಾಂಗಕ್ಕೆ ಸೇರಿದ ಸುಡುಗಾಡು ಸಿದ್ದರ ಪರಿಸ್ಥಿತಿ ನಿಜಕ್ಕೂ ಶೋಚನೀಯ. ಇಡೀ ದೇಶವೇ ಲಾಕ್ ಡೌನ್ ನಲ್ಲಿರುವಾಗ ಈ ಜನಾಂಗದವರ ನೆರವಿಗೆ ಇಲ್ಲಿಯವರೆಗೂ ಯಾರೂ ಮುಂದಾಗಿಲ್ಲ.
ಒಂದು ಹೊತ್ತಿನ ಊಟಕ್ಕಾಗಿ ನೂರಾರು ಕುಟುಂಬಗಳು ಅಂಗಲಾಚುತ್ತಿವೆ. ಯಾರಾದಾರೂ ದಾನಿಗಳು ನೆರವಿಗೆ ಧಾವಿಸುತ್ತಾರಾ ಎಂದು ಕಾದುಕುಳಿತಿದ್ದಾರೆ. ಐದು ದಿನಗಳಿಂದ ಮಕ್ಕಳಿಗೂ ಸಹ ಊಟವನ್ನು ನೀಡಲಾಗದ ಸ್ಥಿತಿ ಪಾಲಕರಿಗೆ ಬಂದೊದಗಿದೆ.
ಇನ್ನು ಮನೆಯಲ್ಲಿ ಏನು ಇಲ್ಲ ಅಪ್ಪ-ಅಮ್ಮನ ಬಳಿ ಊಟ ಕೇಳಿದರೆ ಮನೆ ಬಿಟ್ಟು ಹೋಗು ಅಂತಾರೆ ಅಂತ ಹೇಳೊ ಈ ಬಾಲಕನ ಒಡಲಾಳದ ಮಾತುಗಳನ್ನು ಕೇಳ್ತಿದ್ರೆ ಕಣ್ಚಂಲ್ಲಿ ನೀರು ಬರುತ್ತೆ.ಊಟ ಮಾಡಿ ಐದು ದಿನ ಆಯ್ತು. ದಯವಿಟ್ಟು ನನಗೆ ಊಟವನ್ನು ಕೊಡಿ ಎಂದು ಆ ಬಾಲಕ ತುತ್ತು ಅನ್ನಕ್ಕಾಗಿ ಅಂಗಲಾಚುತ್ತಿದ್ದಾನೆ.ಇಷ್ಟೆಲ್ಲ ಆಗ್ತಿದ್ರೂ ತಾಲ್ಲೂಕು ಆಡಳಿತ ಅಲೆಮಾರಿ ಜನಾಂಗದವರ ಮನವಿಗೆ ಸ್ಪಂದಿಸುತ್ತಿಲ್ಲ ಎಂಬುದು ಸ್ಥಳೀಯರ ಆರೋಪವಾಗಿದೆ.
ಈ ಕುಟುಂಬಸ್ಥರ ಹಸಿವನ್ನು ನೀಗಿಸಲು ದಾನಿಗಳು ನೆರವಿನ ಹಸ್ತಚಾಚಬೇಕಿದೆ. ಇನ್ನಾದ್ರೂ ಸಂಬAಧಪಟ್ಟ ಇಲಾಖೆ ಎಚ್ಚೆತ್ತುಕೊಂಡು ಅಗತ್ಯ ಸಾಮಗ್ರಿಗಳನ್ನು ಒದಗಿಸಿ ಅವರ ನೆರವಿಗೆ ಧಾವಿಸುತ್ತಾ ಎಂಬುದನ್ನು ಕಾದುನೋಡ್ಬೇಕಿದೆ.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು (ರಾಯಚೂರು)

Please follow and like us:

Related posts

Leave a Comment