ಕೋವಿಡ್ ಕೆಲಸ ಬಿಟ್ಟು ನಿಮಗೆ ಬೇರೆ ಏನಾದ್ರೂ ಕೆಲಸ ಇದ್ಯಾ?

ಬೆಂಗಳೂರು: ಕಳೆದ ರಾತ್ರಿ ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸರ ಮೇಲೆ ನಡೆದ ಹಲ್ಲೆ ಹಿನ್ನೆಲೆ ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬಳಿಕ ಯಾರೇ ಸೋಂಕಿತರು ಕಂಡು ಬಂದಲ್ಲಿ ಅವರನ್ನು ಕ್ವಾರಂಟೈನ್ ಗೊಳಪಡಿಸಿ ಎಂದು ಪೊಲೀಸ್ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.ಇನ್ನು ಮುಂದೆ ಯಾವುದೇ ಲೋಪವಾಗದಂತೆ ಎಚ್ಚರವಹಿಸಿ ಎಂದೂ ಪೊಲೀಸರಿಗೆ ಹೇಳಿದರು.
ನಿನ್ನೆ ರಾತ್ರಿ ಪಾದರಾಯನಪುರದಲ್ಲಿ ನಡೆದ ಗಲಾಟೆ ಕುರಿತಂತೆ ಪಶ್ಚಿಮ ವಲಯ ಡಿಸಿಪಿ ರಮೇಶ್ ಭಾನೋಟ್ ಅವರನ್ನು ಸಚಿವ ಬೊಮ್ಮಾಯಿ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ನಿನ್ನೆ ಈ ಘಟನೆ ನಡೆದಾಗ ನೀವು ಇಲ್ಲಿಗೆ ಯಾಕೆ ಬರಲಿಲ್ಲ? ಆ ಸಮಯದಲ್ಲಿ ನೀವು ಎಲ್ಲಿದ್ರಿ? ಕೋವಿಡ್ ಕೆಲಸ ಬಿಟ್ಟು ನಿಮಗೆ ಬೇರೆ ಏನಾದ್ರೂ ಕೆಲಸ ಇದ್ಯಾ? ನಿಮ್ಮಂಥ ಹಿರಿಯ ಅಧಿಕಾರಿಗಳು ಸ್ಥಳದಲ್ಲಿರಬೇಕಿತ್ತು. ಇನ್ಮೇಲೆ ಹೀಗಾಗಬಾರದು ಅಂತಾ ಸಾರ್ವಜನಿಕರ ಎದುರಲ್ಲೇ ಸಚಿವ ಬೊಮ್ಮಾಯಿ ಖಡಕ್ಕಾಗಿ ವಾರ್ನ್ ಮಾಡಿದರು.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment