ರಾಜ್ಯದಲ್ಲಿ 3 ಕೊರೊನಾ ಕೇಸ್,ಓರ್ವ ಮಹಿಳೆ ಸಾವು..

ಬೆಂಗಳೂರು:ರಾಜ್ಯದಲ್ಲಿ ಕಳೆದ ಒಂದೆರೆಡು ದಿನಗಳಿಂದ ಡಬ್ಬಲ್ ಡಿಜಿಟಲ್‌ನಲ್ಲಿ ಅಬ್ಬರಿಸುತ್ತಿದ್ದ ಕೊರೋನಾ ಇಂದು ಸಿಂಗಲ್ ಡಿಜಿಟಲ್‌ಗೆ ಬಂದಿದ್ದು, ಬೆಂಗಳೂರು ನಗರ ನಿವಾಸಿ ೪೫ ವರ್ಷದ ಮಹಿಳೆ(ರೋಗಿ-೪೬೫)ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಸದ್ಯ ಮಂಗಳೂರಿನಲ್ಲಿ ಒಂದು ಮತ್ತು ಕಲಬುರಗಿಯಲ್ಲಿ ೨ ಪ್ರಕರಣಗಳು ಮಾತ್ರ ಇಂದು ವರದಿಯಾಗಿದೆ.ಇನ್ನು ೫೦೩ ಪ್ರಕರಣದಲ್ಲಿ ೧೮೨ ಜನ ಗುಣಮುಖರಾಗಿ ಮನೆಗಳಿಗೆ ತೆರಳಿದ್ದು ೧೯ ಮಂದಿ ಮೃತರಾಗಿದ್ದಾರೆ.
ಇನ್ನು ರೋಗಿ-೪೬೫ ಸೋಂಕಿಗೆ ಬಲಿಯಾಗಿದ್ದಾರೆ. ಬೆಂಗಳೂರು ನಗರ ನಿವಾಸಿ ೪೫ ವರ್ಷದ ಮಹಿಳೆ ತೀವ್ರ ಉಸಿರಾಟದ ತೊಂದರೆ ಹಾಗೂ ನಿಮೋನಿಯಾ ಹಿನ್ನೆಲೆ ಬೆಂಗಳೂರಿನ ನಿಗದಿತ ಆಸ್ಪತ್ರಗೆ ಏಪ್ರಿಲ್ ೨೪ರಂದು ದಾಖಲಾಗಿದ್ದರು. ಇವರಿಗೆ ಮಧುಮೇಹ ಸಮಸ್ಯೆ ಕೂಡ ಇದ್ದು, ಈ ಹಿಂದೆ ಕ್ಷಯರೋಗ ಇತ್ತು ಎಂದು ವೈದ್ಯಕೀಯ ದಾಖಲೆ ಇದೆ. ಇಂದು ರೋಗಿ-೪೬೫ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.
ಇಂದು ಆಸ್ಪತ್ರೆಯಿಂದ ಒಟ್ಟು ೨೪ ಮಂದಿ ಬಿಡುಗಡೆಗೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ೮ , ಮೈಸೂರಿನಲ್ಲಿ ೪ , ಬಾಗಲಕೋಟೆಯಲ್ಲಿ ೪, ಮಂಡ್ಯದಲ್ಲಿ ೪, ಬೆಳಗಾವಿಯಲ್ಲಿ ೪, ಬಳ್ಳಾರಿಯಲ್ಲಿ ೨ ಮಂದಿ ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆಗೊಂಡಿದ್ದಾರೆ.
ಕರ್ನಾಟಕದಲ್ಲಿ ಸದ್ಯ ೩೦೨ ಮಂದಿ ಕೊರೊನಾದಿಂದ ಬಳಲುತ್ತಿದ್ದಾರೆ. ಇವರಲ್ಲಿ ಓರ್ವ ಗರ್ಭಿಣಿ ಸೇರಿ ಒಟ್ಟು ೨೯೬ ಮಂದಿ ನಿಗದಿತ ಆಸ್ಪತ್ರೆಗಳಲ್ಲಿ ಪ್ರತ್ಯೇಕ ವಾರ್ಡುಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ ೬ ಮಂದಿ ಸ್ಥಿತಿ ಗಂಭಿರವಾಗಿದ್ದು, ಐಸಿಯುನಲ್ಲಿ ಚಿಕಿತ್ಸೆಗೆ ಒಳಪಟ್ಟಿದ್ದಾರೆ.

ನ್ಯೂಸ್ ಬ್ಯೂರೋ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment