ಬಾಂಬೆಯಿ0ದ ಕೊರೊನಾ ಸೋಂಕಿತ ಸಾತೇನಹಳ್ಳಿಗೆ ಬಂದ ಬಗ್ಗೆ ತನಿಖೆ

ನಾಗಮಂಗಲ(ಮ0ಡ್ಯ): ದಿಲ್ಲಿಯ ನಿಜಾಮುದ್ದೀನ್ ತಘ್ಲಿಗಿ ಮತ್ತು ನಂಜನಗೂಡಿನ ಜ್ಯೂಬಿಲಿಯಂಟ್ ಸಂಪರ್ಕದಿ0ದ ನಗರ ಮತ್ತು ಪಟ್ಟಣ ಪ್ರದೇಶಗಳಿಗೆ ಸೀಮಿತವಾಗಿದ್ದ ಕೊರೊನಾ ಬಾಂಬೆ ನಂಟಿನಿ0ದ ಗ್ರಾಮಕ್ಕೂ ಅಂಟಿದ ಸಾತೇನಹಳ್ಳಿಗೆ ಶಾಸಕ ಸುರೇಶ್ ಗೌಡ್ರು ಮತ್ತು ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡರು ಭೇಟಿ ನೀಡುವ ಮೂಲಕ ಅಧಿಕಾರಿ ವರ್ಗ ಕೈಗೊಂಡಿರುವ ಮುನ್ನೆಚ್ಚರಿಕೆಯ ಕ್ರಮಗಳ ಬಗ್ಗೆ ಮಾಹಿತಿ ಪಡೆದರು.
ಅಂದ ಹಾಗೇ ಕೊರೊನಾ ಸೋಂಕಿತ ವ್ಯಕ್ತಿಯ ಪತ್ನಿ ಮತ್ತು ಬಾಮೈದುನನ್ನು ಭೇಟಿ ಮಾಡಿ ಯೋಗಕ್ಷೇಮ ವಿಚಾರಿಸಿದರು.
ಯಾವುದೇ ರೀತಿಯಿಂದಲೂ ಭಯ ಪಡದಂತೆ ಶೀಘ್ರವೇ ಸಂಬ0ಧಿ ಕೊರೊನಾ ಸೋಂಕಿತ ವ್ಯಕ್ತಿ ಗುಣಮುಖವಾಗಿ ಹಿಂದಿರುಗುವ ಭರವಸೆ ನೀಡಿದರು.
ಜೊತೆಗೆ ಗ್ರಾಮಸ್ಥರಿಗೆ ಆತ್ಮಸ್ಥೈರ್ಯ ತುಂಬುವ ಮೂಲಕ ಸಮಾಲೋಚನೆ ನಡೆಸಿ ಅಗತ್ಯತೆಗಳ ಪೂರೈಕೆಯ ಬಗ್ಗೆ ತೀವ್ರ ನಿಗಾ ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ನಂತರ ಮಾತನಾಡಿದ ಶಾಸಕ ಸುರೇಶ್ ಗೌಡ,ಬಾಂಬೆಯಲ್ಲಿ ಕಂಡು ಬಂದಿರುವ ಕೊರೊನಾ ವೈರಸ್ ತುಂಬಾ ಅಪಾಯಕಾರಿಯಾಗಿದೆ.
ಈ ನಡುವೆಯೂ ಬಾಂಬೆಯಿ0ದ ಇಲ್ಲಿಯವರೆಗೆ ಬಂದಿರುವ ಬಗ್ಗೆ ಸೂಕ್ತ ತನಿಖೆಯಾಗಬೇಕಿದೆ.ಅಲ್ಲದೆ ಹೊರ ರಾಜ್ಯಗಳಿಂದ ತಾಲ್ಲೂಕಿಗೆ ಆಗಮಿಸಿರುವ ೬೭೫ ಜನಗಳ ಪೈಕಿ ಬಾಂಬೆಯಿ0ದಲೇ ೬೦೦ ಜನ ಬಂದಿದ್ದಾರೆ. ಇವರಿಗೆಲ್ಲಾ ಕೊರೊನಾ ಪರೀಕ್ಷೆ ತ್ವರಿತ ಗತಿಯಲ್ಲಿ ಆಗಬೇಕಿದೆ. ಈ ಪ್ರಕರಣದಿಂದ ನಿಷೇಧಿತ ಪ್ರದೇಶವಾಗಿ ಸೀಲ್ ಮಾಡಲಾಗಿರುವ ಈ ಗ್ರಾಮಸ್ಥರಿಗೆ ಯಾವುದೇ ತೊಂದರೆಯಾಗದ0ತೆ ಕ್ರಮ ವಹಿಸಲು ಸೂಚಿಸಲಾಗಿದೆ. ಸ್ಥಳೀಯರು ಆತಂಕಪಡದೆ ಎಚ್ಚರವಹಿಸುವ ಮೂಲಕ ಸಹಕರಿಸಬೇಕು ಎಂದರು.
ಇದೇ ವೇಳೆ ಮಾತನಾಡಿದ ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ,ಲಾಕ್ ಡೌನ್ ಹಿನ್ನಲೆಯಲ್ಲಿ ಗಡಿ ನಿಯಂತ್ರಣದ ಉಲ್ಲಂಘನೆ ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿ.ಆದರೂ ಬಾಂಬೆ ಮತ್ತಿತರ ಹೊರ ರಾಜ್ಯ ಅಥವ ಹೊರ ಜಿಲ್ಲೆಗಳಿಂದ ಸ್ವಗ್ರಾಮಗಳಿಗೆ ಆಗಮಿಸಿರುವವರ ಕೊರೊನಾ ಪರೀಕ್ಷೆಗೆ ಮೊಬೈಲ್ ವಾಹನವನ್ನು ಬಳಸುವ ಮೂಲಕ ಆದಷ್ಟು ಬೇಗ ತಪಾಸಣೆಯಾಗಬೇಕಿದೆ.
ಅಲ್ಲದೆ, ಸಾಮಾಜಿಕ ಅಂತರವೊ0ದೆ ಮದ್ದಾಗಿರುವ ನಿಟ್ಟಿನಲ್ಲಿ ನಮ್ಮ ರಕ್ಷಣೆ-ನಮ್ಮ ಹೊಣೆ ಎಂಬ ಘೋಷವಾಕ್ಯದ ಸಂಕಲ್ಪ ಪ್ರತಿಯೊಬ್ಬರ ಪ್ರತಿಜ್ಞೆಯಾಗಬೇಕು ಎಂದರು.
ಪಾAಡವಪುರ ಉಪವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್ ಕುಂಞ ಅಹಮ್ಮದ್, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಧನಂಜಯ, ತಾ.ಪಂ. ಇಒ ಅನಂತರಾಜು, ಸರ್ಕಲ್ ಇನ್ಸ್ ಪೆಕ್ಟರ್ ರಾಜೇಂದ್ರ ಹಾಗೂ ಪುರಸಭಾ ಮುಖ್ಯಾಧಿಕಾರಿ ಕೃಷ್ಣಪ್ರಸಾದ್ ಇದ್ದರು.

ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ(ಮ0ಡ್ಯ)

Please follow and like us:

Related posts

Leave a Comment