ಸಂಕಷ್ಟಕ್ಕೆ ಸಿಲುಕಿದ ಗೂಡ್ಸ್ ಆಟೋ ಚಾಲಕರು..

ತಿ.ನರಸೀಪುರ(ಮೈಸೂರು):ಲಾಕ್‌ಡೌನ್ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಗೂಡ್ಸ್ ಆಟೋ ಚಾಲಕರು ಇದೀಗ ಸರ್ಕಾರದ ಮೊರೆ ಹೋಗಿದ್ದಾರೆ.
ಸದ್ಯ ಈ ಚಾಲಕರ ಪರ ತಾಲೂಕು ಪಂಚಾಯತ್ ಸದಸ್ಯ ರಮೇಶ್ ಧ್ವನಿ ಎತ್ತಿದ್ದು,ಆಟೋ ಚಾಲಕರ ಜೊತೆ ಶಿರಸ್ತೇದಾರ್ ಪ್ರಭುರಾಜ್ ಅವರಿಗೆ ಸಂಕಷ್ಟದ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಕಾರು ಚಾಲಕರ ಸಂಘದ ಅಧ್ಯಕ್ಷ ಮಣಿಕಂಠ ರಾಜ್ ಗೌಡ, ತಾಲ್ಲೂಕಿನಾದ್ಯಂತ ಸಾವಿರಕ್ಕೂ ಹೆಚ್ಚು ಚಾಲಕರು ಇದ್ದಾರೆ.ಹೀಗಾಗಿ ಅವರಿಗೆಲ್ಲಾ ನಮ್ಮ ಸಂಘದ ವತಿಯಿಂದ ನಮ್ಮ ಕೈಲಾದಷ್ಟು ಸಹಾಯ ಮಾಡಿದ್ದೇವೆ. ಆದರೆ ಸರ್ಕಾರವು ಕೂಡ ಚಾಲಕರು ಮತ್ತು ಕಾರ್ಮಿಕರ ಬಗ್ಗೆ ಕಾಳಜಿ ವಹಿಸಬೇಕು ಎಂದು ತಿಳಿಸಿದರು.
ಈ ಸಂದರ್ಭ ಚಾಲಕರಾದ ಚಂದ್ರು,ಕಾರ್ ಮಲ್ಲಪ್ಪ,ಸುರೇಶ್ ಸೇರಿದಂತೆ ಮತ್ತಿತರರು ಹಾಜರಿದ್ದರು.

ರೇವಣ್ಣ ಎಕ್ಸ್ ಪ್ರೆಸ್ ಟಿವಿ ತಿ.ನರಸೀಪುರ(ಮೈಸೂರು)

Please follow and like us:

Related posts

Leave a Comment