ಕರ್ನಾಟಕಕ್ಕೆ ಬರಲು ಕಳ್ಳದಾರಿ ಮೊರೆ ಹೋದ ತಮಿಳಿಗರು..

ಆನೇಕಲ್(ಬೆಂ.ನಗರ): ಕರ್ನಾಟಕಕ್ಕೆ ಬರಲು ತಮಿಳುನಾಡಿನ ಜನರು ಕಳ್ಳದಾರಿ ಹುಡುಕಿಕೊಂಡಿರುವುದು ತಡವಾಗಿ ಬೆಳಕಿಗೆ ಬಂದಿದೆ.
ಈ ಹಿಂದೆ ಇದೇ ತಮಿಳುನಾಡಿನ ಜನರು ಕರ್ನಾಟಕ್ಕೆ ಬಂದು ಎಣ್ಣೆ ತೆಗೆದುಕೊಂಡು ಹೋಗುತ್ತಿದ್ದರು.ಆದರೆ ಪೊಲೀಸರ ಯಾವಾಗಾ ಇದಕ್ಕೆಲ್ಲಾ ತಡೆ ಹಾಕಿದರೋ ಆಗಿನಿಂದ ತಮಿಳು ನಾಡಿನ ಮಂದಿ ಕರ್ನಾಟಕಕ್ಕೆ ಬರಲು ಹಿಂದೆ-ಮುAದೆ ನೋಡುತ್ತಿದ್ದರು.ಆದರೀಗ ಮತ್ತೆ ಕಳ್ಳದಾರಿ ಹುಡುಕಿಕೊಂಡಿರುವ ಇದೇ ಜನರು ಕರ್ನಾಟಕಕ್ಕೆ ಎಂಟ್ರಿ ಕೊಡುತ್ತಿದ್ದಾರೆ.
ಅಂದ ಹಾಗೇ ನೆರೆ ರಾಜ್ಯ ತಮಿಳುನಾಡಿನಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ.
ಹೀಗಾಗಿ ತಮಿಳಿಗರು ರಾಜ್ಯ ಪ್ರವೇಶ ಮಾಡದಂತೆ ಗಡಿಭಾಗದ ಗ್ರಾಮಗಳಿಂದ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಬಂದ್ ಮಾಡಲಾಗಿದೆ.
ಆದರೆ ತಮಿಳಿಗರು ಮಾತ್ರ ಎಲ್ಲೆಂದರಲ್ಲಿ ತೋಪುಗಳು, ಹೊಲಗಳ ಮೂಲಕ ರಾಜ್ಯಕ್ಕೆ ನುಗ್ಗುತ್ತಿರುವುದು ಪೋಲಿಸರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.
ಇನ್ನು ತಮಿಳಿಗರು ರಾಜ್ಯ ಪ್ರವೇಶ ಮಾಡದಂತೆ ಕರ್ನಾಟಕ ಗಡಿಭಾಗ ಆನೇಕಲ್ ತಾಲ್ಲೂಕಿನ ಸೋಲೂರು, ತಿಮ್ಮಸಂದ್ರ, ಹಾಗೂ ಬಳ್ಳೂರು ಗ್ರಾಮಗಳ ರಸ್ತೆಯನ್ನು ಜೆಲ್ಲಿ ಸುರಿದು ಹಾಗು ಜೆಸಿಬಿ ಮೂಲಕ ಟ್ರೆಂಚ್ ತೆಗೆದಿದ್ದರು ಸಹ ಅದನ್ನು ತೆರವು ಮಾಡಿಕೊಂಡು ಪ್ರತಿದಿನ ಸಾವಿರಾರು ಸಂಖ್ಯೆಯಲ್ಲಿ ಬೈಕ್ ಗಳ ಮೂಲಕ ತಮಿಳಿಗರು ರಾಜ್ಯ ಪ್ರವೇಶಿಸುತ್ತಿದ್ದಾರೆ.
ಇದಲ್ಲದೆ, ಕೆಲವರು ತೋಪುಗಳ ಹಾಗೂ ಹೊಲಗಳ ಮಧ್ಯೆ ಅಡ್ಡದಾರಿ ಹಿಡಿದು ಹಳ್ಳಕ್ಕೆ ಕಲ್ಲು ತುಂಬಿ ವಾಹನಗಳನ್ನು ಒಂದೆಡೆಯಿAದ ಇನ್ನೊಂದೆಡೆಗೆ ಶಿಫ್ಟ್ ಮಾಡಿಕೊಂಡು ಜನ ಓಡಾಡಲು ಸಾಧ್ಯವಾಗದ ಹಳ್ಳದಿಂದ ದ್ವಿಚಕ್ರ ವಾಹನಗಳನ್ನು ಹೊತ್ತು ಜನರು ಬರುತ್ತಿದ್ದಾರೆ.
ಒಟ್ಟಾರೆ ತಮಿಳುನಾಡಿನ ಕೆಲ ಕುಡುಕರು ಮದ್ಯ ಖರೀದಿಗೆ ಬರಲು ಮಾಡಿಕೊಂಡ ದಾರಿಯಲ್ಲಿ ಸಾರ್ವಜನಿಕರು ಕೂಡ ನುಗ್ಗುತ್ತಿದ್ದಾರೆ.ಜನ ಓಡಾಡಲು ಸಾಧ್ಯವಾಗದ ರಸ್ತೆಯಲ್ಲಿ ದ್ವಿಚಕ್ರ ವಾಹನಗಳನ್ನು ಹೊತ್ತು ರಾಜ್ಯಕ್ಕೆ ಎಂಟ್ರಿ ಕೊಡುತ್ತಿದ್ದಾರೆ.ಪೊಲೀಸರು ಎಷ್ಟೇ ಕ್ರಮಕೈಗೊಂಡರೂ ತಮಿಳಿಗರು ಮಾತ್ರ ನಿರಾತಂಕವಾಗಿ ಓಡಾಡುತ್ತಿದ್ದಾರೆ.

ಸಿ.ಕಾರ್ತಿಕ್ ಎಕ್ಸ್ ಪ್ರೆಸ್ ಟಿವಿ ಆನೇಕಲ್(ಬೆಂ.ನಗರ)

Please follow and like us:

Related posts

Leave a Comment