ಅಡುಗೆ ಅನಿಲ ಸೋರಿಕೆ,ಇಬ್ಬರಿಗೆ ಗಂಭೀರ ಗಾಯ..

ಶಿರಾ(ತುಮಕೂರು): ಅಡುಗೆ ಅನಿಲ ಸೋರಿಕೆಯಿಂದಾಗಿ ಇಬ್ಬರು ತೀವ್ರ ತರವಾಗಿ ಗಾಯಗೊಂಡಿರುವ ಘಟನೆಯೊಂದು ಶಿರಾ ನಗರದಲ್ಲಿ ನಡೆದಿದೆ.
ಇಲ್ಲಿನ ಕಾಳಿದಾಸ ನಗರದ ವಾಸಿ ನಾಗರತ್ನಮ್ಮ ಎಂಬುವವರ ಮನೆಯಲ್ಲಿ ಕಳೆದ ರಾತ್ರಿ ಅಡುಗೆ ಅನಿಲದ ಸಿಲಿಂಡರ್ ಲೀಕ್ ಆಗುತ್ತಿದ್ದು, ಇದನ್ನು ಪರಿಶೀಲಿಸಲು ಪಕ್ಕದ ಮನೆಯವರಾದ ರೂಪ, ನಾಗರಾಜು ಚಂದ್ರಶೇಖರ್ ಹಾಗೂ ನಟರಾಜು ಎಂಬುವವರು ಮನೆಯೊಳಗೆ ಹೋಗಿದ್ದರು.
ಆ ಸಂದರ್ಭದಲ್ಲಿ ಅವರ ಮನೆಯ ದೇವರ ಫೋಟೋ ಹತ್ತಿರ ಹಚ್ಚಿದ್ದ ದೀಪದ ಬೆಂಕಿ ಲೀಕ್ ಆಗುತ್ತಿದ್ದ ಗ್ಯಾಸ್‌ಗೆ ಹರಡಿದ ತಕ್ಷಣ ಬೆಂಕಿ ಹೆಚ್ಚಾಗಿದೆ. ಇದರಿಂದ ಚಂದ್ರಶೇಖರನಿಗೆ ತೀವ್ರ ತರವಾಗಿ ಸುಟ್ಟ ಗಾಯಗಳಾಗಿದ್ದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ನು ನಟರಾಜು ಸಹ ಸುಟ್ಟ ಗಾಯಗಳಿಂದ ತುಮಕೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಈ ಸಂಬAಧ ನಗರ ಪೋಲಿಸ್ ಠಾಣಾ ಪೋಲಿಸರು ಪರಿಶೀಲನೆ ನೆಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶ್ರೀಮAತ್ ಕುಮಾರ್ ಎಕ್ಸ್ ಪ್ರೆಸ್ ಟಿವಿ ಶಿರಾ(ತುಮಕೂರು)

Please follow and like us:

Related posts

Leave a Comment