ಧಾರವಾಡ ಜಿಲ್ಲೆಯಲ್ಲಿ 4 ಕೊರೊನಾ ಕೇಸ್

ಧಾರವಾಡ:ಧಾರವಾಡದ ಜಿಲ್ಲೆಯಲ್ಲಿಂದು ನಾಲ್ಕು ಕೋವಿಡ್ ಪಾಸಿಟಿವ್ ಪ್ರಕರಣ ಪತ್ತೆಯಾಗಿದ್ದು, ಜಿಲ್ಲೆಯಲ್ಲಿ ಸೊಂಕೀತರ ಸಂಖ್ಯೆ ೨೬ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ.
ಮಹಾರಾಷ್ಟ್ರದ ಮುಂಬೈ ಹಾಗೂ ಇತರೆಡೆ ಸಂಚರಿಸಿದ ಹಿನ್ನೆಲೆ ಹೊಂದಿರುವ ಪಿ-೧೧೨೩ (೩೯ ವರ್ಷದ ವ್ಯಕ್ತಿ), ಪಿ-೧೧೨೪(೧೬ ವರ್ಷದ ಯುವಕನಿಗೆ ಪಿ-೫೮೯ ಸಂಪರ್ಕ), ಪಿ-೧೧೪೨(೨೮ ವರ್ಷದ ಮಹಿಳೆಗೆ), ಪಿ-೧೧೪೩(೨೫ ವರ್ಷದ ವ್ಯಕ್ತಿಗೆ) ಸೋಂಕು ದೃಢಪಟ್ಟಿದೆ.
ಈಗಾಗಲೇ ೭ ಜನ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸೊಂಕೀತರ ಸಂಖ್ಯೆ ೨೬ಕ್ಕೆ ಏರಿದೆ.ಅಲ್ಲದೇ ಉಳಿದವರು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಜು ಮುದ್ಗಲ್ ಎಕ್ಸ್ ಪ್ರೆಸ್ ಟಿವಿ ಧಾರವಾಡ

Please follow and like us:

Related posts

Leave a Comment