ಮಳವಳ್ಳಿಯಲ್ಲಿ ಒಂದೊ0ದೇ ಏರಿಯಾ ಸೀಲ್ ಡೌನ್‌ನಿಂದ ಮುಕ್ತ..

ಮಳವಳ್ಳಿ(ಮಂಡ್ಯ): ಜಿಲ್ಲೆಯಲ್ಲೇ ಮಳವಳ್ಳಿ ಪಟ್ಟಣದ ಈದ್ಗಾ ಮೊಹಲ್ಲಾ ೭ನೇ ವಾರ್ಡು ಪ್ರಥಮಯಾಗಿ ಕೊರಾನಾ ಮಹಾಮಾರಿ ಕಾಣಿಸಿಕೊಂಡಿದ್ದ ಜಾಗವನ್ನು ತಾಲ್ಲೂಕು ಆಡಳಿತ ಇಂದು ಸೀಲ್ ಡೌನ್‌ನಿಂದ ಮುಕ್ತ ಗೊಳಿಸಿದೆ.
ಮಳವಳ್ಳಿ ಪಟ್ಟಣದ ಈದ್ಗಾ ಮೊಹಲ್ಲಾ ೭ನೇ ವಾರ್ಡ್ ಏ.೭ರಂದು ಜಿಲ್ಲೆಯಲ್ಲೇ ಪ್ರಥಮ ಬಾರಿಗೆ ಕೊರಾನಾ ಸೋಂಕು ಕಾಣಿಸಿಕೊಂಡಿದ್ದು, ಇಂದಿಗೆ ೫೨ ದಿನವಾಗಿದ್ದು,ಅಂದಿನ ಇಂದಿನವರೆಗೂ ಸೀಲ್ ಡೌನ್ ಮಾಡಿದ್ದು ತಾಲ್ಲೂಕು ಆಡಳಿತ ಕೊರಾನಾ ಬೇರೆಡೆ ಹಬ್ಬಿದಂತೆ ನೋಡಿಕೊಂಡಿದೆ.
ಇದಲ್ಲದೆ ತಾಲ್ಲೂಕಿನ ಎಲ್ಲಾ ಕೋರಾನಾ ವಾರಿಯರ್ಸ್ಗೆ ೭ನೇ ವಾರ್ಡ್ನ ಈದ್ಗಾ ಮೊಹಲ್ಲಾ ಬಡಾವಣೆ ಸಾರ್ವಜನಿಕರು ಪುಷ್ವಾರ್ಚನೆ ಮಾಡಿ ಸ್ವಾಗತಿಸಿದರು.ಇದಲ್ಲದೆ ತಾಲ್ಲೂಕು ಆಡಳಿತ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅಲ್ಲದೆ, ಸೀಲ್ ಡೌನ್ ತೆಗೆಯುತ್ತಿದ್ದಂತೆ ಸಾರ್ವಜನಿಕರು ಕುಣಿತ ಕುಪ್ಪಳಿಸುವ ಮೂಲಕ ಹರ್ಷ ವ್ಯಕ್ತಪಡಿಸಿದರು.
ಇನ್ನೂ ತಹಶೀಲ್ದಾರ್ ಚಂದ್ರಮೌಳಿ ಮಾತನಾಡಿ,ಸೀಲ್ ಡೌನ್‌ನಿಂದ ಇಂದಿನವರೆಗೂ ತಾಲ್ಲೂಕು ಆಡಳಿತ ಜೊತೆ ಕೈ ಜೋಡಿಸಿದ ಎಲ್ಲಾ ಜನರಿಗೂ ಧನ್ಯವಾದಗಳು ಎಂದರು.
ಇನ್ನೂ ಕೋಟೆ ಬೀದಿಯ ಕೊನೆ ಪ್ರಕರಣದಲ್ಲಿ ಇಬ್ಬರು ಗುಣ ಮುಖರಾಗಿದ್ದರೂ ಅವಧಿ ಮುಗಿದ ನಂತರ ಸೀಲ್ ಡೌನ್ ತೆರವುಗೊಳಿಸಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಡಾ.ಸಂಜಯ್ ಪುರಸಭೆ ಸದಸ್ಯ ನೂರುಲ್ಲಾ , ನಂದಕುಮಾರ್ ಸೇರಿದಂತೆ ಮತ್ತಿತ್ತರರು ಹಾಜರಿದ್ದರು.

ಎ.ಎನ್.ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ(ಮಂಡ್ಯ)

Please follow and like us:

Related posts

Leave a Comment