ರೈತರಿಗೆ ಬೆಳೆ ಹಾನಿ ಪರಿಹಾರ ನೀಡಲು ಒತ್ತಾಯ….

ಕಲಬುರುಗಿ: ಅಫಜಲಪೂರ ತಾಲೂಕಿನಲ್ಲಿ ಸತತ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಬೆಳೆ ಹಾನಿಯಾದ ರೈತರಿಗೆ ಕೂಡಲೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಜೆ ಎಂ ಕೋರಬು ಮತ್ತು ಜೆ ಎಂ ಕೋರಬು ಪೌಂಡೇಶನ್ ಸದಸ್ಯರು ಹಾಗೂ ತಾಲೂಕಿನ ರೈತರು ಸೇರಿ ತಹಸೀಲ್ದಾರ್ ಯಲ್ಲಪ್ಪ ಸುಭೇದಾರ ರವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ದರು. ಮಾತನಾಡಿದ ಸಮಾಜ ಸೇವಕ ಜೆ ಎಂ ಕೋರಬು ತಾಲೂಕಿನಲ್ಲಿ ಸತತವಾಗಿ ಸುರಿಯುತ್ತಿರುವ ಮಳೆಯಿಂದ ರೈತರು ಬಿತ್ತನೆ ಮಾಡಿದ ತೊಗರಿ ,ಗೋದಿ,ಹತ್ತಿ,ಹೆಸರು,ಶೇಂಗಾ,ಸೇರಿದಂತೆ ಇನ್ನಿತರ ವಾಣಿಜ್ಯ ಬೇಳೆಗಳು ಹೆಚ್ಚು ಮಳೆಯಿಂದಾಗಿ ಹಾನಿಗಿಡಾಗಿವೆ. ಹಿಗಾಗಿ ಸರ್ಕಾರ ಕೂಡಲೇ ಬೇಳೆ ಹಾನಿ ಸಮೀಕ್ಷೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಒಂದು ವೇಳೆ ಸರ್ಕಾರ ಕೂಡಲೇ ಸ್ಪಂದಿಸದಿದ್ದರೆ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನಿಡಿದರು..

ವರದಿ: ಈರಣ್ಣ ಎಂ.ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪೂರ

Please follow and like us:

Related posts

Leave a Comment