ತಾಲೂಕು ಆಡಳಿತ ಹಾಗೂ ವೈಧ್ಯಾಧಿಕಾರಿಗಳ ನಡೆಗೆ ಸಾರ್ವಜನಿಕರು ಕಂಗಾಲು..!

ಲಿಂಗಸೂಗೂರು : ಕೊರೊನಾ ಎಂಬ ವೈರಸ್ ಗೆ ಈಡೀ ದೇಶವೇ ತಲ್ಲಣಗೊಂಡಿದೆ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆಯೂ ಶರವೇಗದಲ್ಲಿ ಹೆಚ್ಚುತ್ತಿದೆ. ಆದರೆ ಕೊರೊನಾ ಹೆಸರಿನಲ್ಲಿ ಅಧಿಕಾರಿಗಳು ಮಾತ್ರ ನಡೆದುಕೊಳ್ಳುತ್ತಿರುವ ರೀತಿ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಹಲ್ಕಾವಟಗಿ ಗ್ರಾಮ ಪಂಚಾಯಿತಿ ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಅಂತಾ ಹೇಳಿ ಕರಡಕಲ್ ಬಳಿ ಇರುವ ಕ್ವಾರಂಟೈನ್ ಕೇಂದ್ರಕ್ಕೆ ವ್ಯಕ್ತಿಯನ್ನು ಆಂಬುಲೆನ್ಸ್ ಮೂಲಕ ಕರೆದೊಯ್ದಿದ್ದಾರೆ. ಅದಾದ ನಂತರ ಆ ವ್ಯಕ್ತಿಯ ಗಂಟಲು ದ್ರವ ಪಡೆದು ತಪಾಸಣೆಗೆ ಕಳಿಸಲಾಗಿತ್ತು. ಆದರೆ ವರದಿಯಲ್ಲಿ ನೆಗಟಿವ್ ಬಂದಿದ್ದು ಆ ವ್ಯಕ್ತಿಯನ್ನು ಸ್ವ ಗ್ರಾಮಕ್ಕೆ ಕಳಿಸಿಕೊಟ್ಟಿದ್ದಾರೆ. ಆದರೆ ಗ್ರಾಮದ ಜನ ಮಾತ್ರ ಈ ವ್ಯಕ್ತಿಯನ್ನು ಮಾತನಾಡಿಸದೇ ದೂರವಿಟ್ಟಿದ್ದು ಮನೆಯವರನ್ನು ದೂರವಿಟ್ಟಿದ್ದಾರೆ. ಇದರಿಂದಾಗಿ ವ್ಯಕ್ತಿ ಮತ್ತು ಮನೆಯವರು ಮಾನಸಿಕ ಖಿನ್ನತೆಗೆ ಒಳಗಾಗಿದ್ದಾರೆ. ಇಂತಹದ್ದೆ ಎಡವಟ್ಟೊಂದನ್ನು ಇದೇ ತಿಂಗಳು 23ನೇ ತಾರೀಖಿನಂದು ಪಟ್ಟಣದ ಫುಟ್ ಬಾತ್ ಹಣ್ಣಿನ ವ್ಯಾಪಾರ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಪಾಸಿಟಿವ್ ಅಂತಾ ಹೇಳಿ, ಮರುದಿನವೇ ನೆಗಟಿವ್ ಇದೆ ಮನೆಗೆ ಹೋಗಿ ಅಂತಾ ಅಧಿಕಾರಿಗಳು ಹೇಳಿದ್ದಾರೆ. ಹೀಗೆ ಎಡವಟ್ಟಿನ ಮೇಲೆ ಎಡುವಟ್ಟು ಮಾಡುತ್ತಿರುವ ವೈಧ್ಯಾಧಿಕಾರಿಗಳಿಗೆ ಹಾಗೂ ತಾಲೂಕಾ ಆಡಳಿತದ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಇನ್ನಾದರೂ ಕೊರೋನಾ ಇರುವ ಬಗ್ಗೆ ಖಚಿತ ಪಡಿಸಿಕೊಂಡ ನಂತರ ಅವರನ್ನು ಕರೆದೊಯ್ಯುವಂತೆ ಮೇಲಾಧಿಕಾರಿಗಳು ಕ್ರಮ ಕೈಗೊಳ್ಳಬೇಕು.

ವೀರೇಶ್ ಅರಮನಿ ಎಕ್ಸ್ ಪ್ರೆಸ್ ಟಿವಿ ಲಿಂಗಸೂಗೂರು

Please follow and like us:

Related posts

Leave a Comment