ಅಕ್ರಮ ಸಕ್ರಮ ಹೆಸರಲ್ಲಿ ರೈತರಿಂದ ಹಣ ಲೂಟಿ..!

ವಿಜಯಪುರ: ಅಕ್ರಮ ಸಕ್ರಮ ಯೋಜನೆಯ ಅಡಿಯಲ್ಲಿ ರೈತರಿಗೆ ಉಚಿತ ಟ್ರಾಮ್ಸರ್ ಒದಗಿಸಬೇಕೆಂದು ಇಂದು ಜೆಡಿಎಸ್ ಮುಖಂಡರಾದ ಬಿ ಡಿ.ಪಾಟೀಲರ ನೇತೃತ್ವದಲ್ಲಿ ಉಪತಶಿಲ್ದಾರಾದ ಆರ್.ಬಿ.ಮೋಗಿಯವರಿಗೆ ಮನವಿಯನ್ನು ಸಲ್ಲಿಸಲಾಯಿತು.ರೈತರಿಗೆ ನೂತನವಾಗಿ ಟ್ರಾಮ್ಸರ್ ಒದಗಿಸಲು 18,000 ಸಾವಿರ ರೂಪಾಯಿಂದ 20,000 ಸಾವಿರ ರೂಪಾಯಿಗೆ ನಿಗದಿ ಪಡಿಸಿದ್ದಾರೆ. ಆದರೆ ಮಾಹಾಮಾರಿ ಕೊರೊನಾದಿಂದ ರೈತರು ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದೆ ಸಂಕಷ್ಟದಿಂದ ಕಂಗಾಲಾಗಿದ್ದಾರೆ. ಇಂತಹ ಸಂದರ್ಭದಲ್ಲಿ 18 ರಿಂದ 20 ಸಾವಿರ ರೂಪಾಯಿ ಕಟ್ಟಿದ್ದರೆ ಮಾತ್ರ ಹೊಸ ಟ್ರಾಮ್ಸರ್ ನೀಡುವುದಾಗಿ ಹಾಗೂ ಅಕ್ರಮ ಸಕ್ರಮ ಯೋಜನೆಯಡಿ ಮಂಜೂರ ಮಾಡುವುದಾಗಿ ತಿಳಿಸಲಾಗಿದೆ ಆದ್ದರಿಂದ ಸಾವಿರಾರು ರೈತರು ಸಾಲಸೂಲ ಮಾಡಿ ಹಣ ಕಟ್ಟುತ್ತಿದ್ದಾರೆ. ಸರ್ಕಾರ ಕೂಡಲೇ ರೈತರ ಸಂಕಷ್ಟ ನಿವಾರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿ.ಡಿ.ಪಾಟೀಲರು ತಿಳಿಸಿದರು.

ವರದಿ: ಶಂಕರ್ ಜಮಾದಾರ ಎಕ್ಸ್ ಪ್ರೆಸ್ ಟಿವಿ

Please follow and like us:

Related posts

Leave a Comment