ಗುತ್ತಿಗೆದಾರರ ಕಪಿಮುಷ್ಟಿಯಲ್ಲಿದ್ದಾರಂತೆ ಸಣ್ಣ ನೀರಾವರಿ ಅಧಿಕಾರಿಗಳು..!

ಮೊಳಕಾಲ್ಮುರು: ಮೊಳಕಾಲ್ಮುರು ತಾಲ್ಲೂಕಿನ ರಾಯಪುರ ತುಪ್ಪದಕ್ಕನ ಹಳ್ಳದಲ್ಲಿ ರಾಜಾ ರೋಷವಾಗಿ ಮಣ್ಣು ತುಂಬುವ ಕೆಲಸ ನಡೆಯುತ್ತಿದ್ದರು,ಅಧಿಕಾರಿಗಳು,ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಈ ಅವ್ಯವಹಾರದ ಬಗ್ಗೆ ಸ್ಥಳೀಯರು ಮತ್ತು ಪತ್ರಕರ್ತರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿ ಪುಟ್ಟ ನಾಯಕನಿಗೆ ತಿಳಿಸಿದರೇ ಯಾವುದೇ ಕ್ರಮ ಕೈಗೊಂಡಿಲ್ಲ. ಹಾಡಗಲೇ ಈ ರೀತಿ ಲೂಟಿಮಾಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಸಾರ್ವಜನಿಕರ ಆಕ್ರೋಶವಾಗಿದೆ. ಇದೊಂದೇ ಅವ್ಯವಹಾರ ಅಲ್ಲದೇ ಈ ಗ್ರಾಮದ ಅಧಿಕಾರಿಗಳು ತಾಲೂಕಿನಲ್ಲಿ ಮಾಡಿರುವಂತಹ ಕಾಮಗಾರಿಗಳು ಗುಣಮಟ್ಟದ್ದು ಅಲ್ಲ, ಇಂತಹವರ ಪರವಾನಿಗೆ ರದ್ದು ಮಾಡಬೇಕು,ಕೆಲ ಗುತ್ತಿಗೆದಾರರು ತಮಗೆ ಅನುಕೂಲವಾಗುವಂತೆ ಅಧಿಕಾರಿಗಳನ್ನು ಬಳಸಿಕೊಂಡು ಮಾಡಿರುವ ಕಾಮಗಾರಿಗಳು 6 ತಿಂಗಳೊಳಗೆ ಕಿತ್ತು ಹೋಗಿರುವ ಸಾಕಷ್ಟು ಘಟನೆಗಳು ಕಣ್ಣಮುಂದಿವೆ.ಆದ್ದರಿಂದ ಮಾನ್ಯ ಜಿಲ್ಲಾಧಿಕಾರಿಗಳು ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

ನಂದೀಶ್ ನಾಯಕ ಎಕ್ಸ್ ಪ್ರೆಸ್ ಟಿವಿ ಮೊಳಕಾಲ್ಮುರು

Please follow and like us:

Related posts

Leave a Comment