ಮಳವಳ್ಳಿಗೆ ಭೇಟಿ ನೀಡಿದ ವಿಶ್ವ ಕರ್ಮ ಮಹಾಸಭಾ ಅಧ್ಯಕ್ಷರಾದ ಕೆ.ಪಿ ನಂಜುಂಡಿ..!

ಮಳವಳ್ಳಿ: ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿ ಹೋಬಳಿ ಮಟ್ಟದ ವಿಶ್ವಕರ್ಮ ಸಮಾಜದ ಸಭೆಯಲ್ಲಿ ಮಾತನಾಡಿ, ದೇಶದಲ್ಲಿ ದೇವರ ವಿಗ್ರಹವನ್ನು ಪ್ರತಿಸ್ಥಾಪನೆ ಮಾಡುವ ನಮ್ಮ ಸಮಾಜ ಇನ್ನೂ ಸರ್ಕಾರದ ಸವಲತ್ತುಗಳನ್ನು ಪಡೆಯಲು ವಂಚಿತರಾಗಿರುವುದು ನೋವಿನ ಸಂಗತಿ ನನ್ನ ಒಬ್ಬನಿಗೆ ಅಧಿಕಾರ ಸಿಕ್ಕರೆ ಸಾಲದು ನಮ್ಮ ಸಮಾಜದ ಎಲ್ಲರಿಗೂ ಅಧಿಕಾರ ಸಿಗಬೇಕು ಅದಕ್ಕಾಗಿ ನಾವೆಲ್ಲರೂ ರಾಜಕೀಯ ಪ್ರಜ್ಞೆ ಮೂಡಿಸಿಕೊಳ್ಳಬೇಕು ಎಂದು ವಿಶ್ವ ಕರ್ಮ ಮಹಾಸಭಾ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ. ಕೆ.ಪಿ ನಂಜುಂಡಿ ಕರೆ ನೀಡಿದರು. ಇನ್ನೂ ಕೆ.ಪಿ ನಂಜುಂಡಿಯವರನ್ನು ಕಿರುಗಾವಲು ಸಂತೆ ಮೈದಾನದಿಂದ ಜೈಕಾರದಿಂದ ಮೆರವಣಿಗೆ ವೇದಿಕೆ ಕರೆತರಲಾಯಿತು. ಇದೇ ವೇಳೆ ವಿಶ್ವಕರ್ಮ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಸಭೆಯಲ್ಲಿ ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ. ಯಮದೂರು ಸಿದ್ದರಾಜು, ವಿಶ್ವಕರ್ಮ ಮಹಾಸಭಾ ಯುವ ಘಟಕ ರಾಜ್ಯಾಧ್ಯಕ್ಷ ಶ್ರೀನಿವಾಸ್ , ತಾಲ್ಲೂಕು ಅಧ್ಯಕ್ಷ ಸೋಮಶೇಖರ್, ಹೋಬಳಿ ಘಟಕದ ಅದ್ಯಕ್ಷ ಲಿಂಗಣ್ಣಾಚಾರಿ, ಮಹೇಶ್, ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ: ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment