ದಲಿತರ ಮೇಲೆ ಹಲ್ಲೆ ನಡೆದ ಹಿನ್ನೆಲೆ- ಕ್ರಮ ಕೈಗೊಳ್ಳದ ಪಿ.ಎಸ್. ಐ ನನ್ನು ಅಮಾನತು ಮಾಡುವಂತೆ ಆಗ್ರಹ…!

ಸಿಂಧನೂರು: ಎಲೆ ಕೂಡ್ಲಿಗಿ ಗ್ರಾಮದಲ್ಲಿ ದಲಿತರ ಮೇಲೆ ಹಲ್ಲೆ ನಡೆಯದಂತೆ ತಡೆಯಲು ವಿಫಲವಾದ ತುರುವಿಹಾಳ ಪಿ.ಎಸ್. ಐ ಎರಿಯಪ್ಪ ನವರನ್ನು ಅಮಾನತು ಮಾಡಬೇಕು ಎಂದು ದಲಿತ ಮುಖಂಡ ಬಾಲಸ್ವಾಮಿ ಕೊಡ್ಲಿ ಆಗ್ರಹಿಸಿದರು..ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು ಎಲೆ ಕೂಡ್ಲಿಗಿ ಗ್ರಾಮದಲ್ಲಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಾಗ ತುರುವಿಹಾಳ ಪಿ. ಎಸ್ ಐ ಮುಂಜಾಗ್ರತಾ ಕ್ರಮವನ್ನು ಕೈಗೊಂಡಿದ್ದರೆ ಈ ರೀತಿ ಘಟನೆ ನಡೆಯುತ್ತಿರಲಿಲ್ಲ. ಆದರೆ ದಲಿತರ ಮೇಲೆ ಹಲ್ಲೆಗೆ ಮೂಲ ಕಾರಣವಾದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವನಗೌಡ ಮೇಲೆ ಯಾವುದೇ ಕ್ರಮ ಜರುಗಿಸಿಲ್ಲ. ಸುಮಾರು 7೦ ದಲಿತರ ಮೇಲೆ ಕೆಸ್ ದಾಖಲಾಗಿದೆ ಕೂಡಲೇ ಈ ಪ್ರಕರಣಗಳನ್ನು ಹಿಂಪಡೆಯಬೇಕು. ಘಟನೆ ನಡೆದ ಸ್ಥಳಕ್ಕೆ ತಹಶಿಲ್ದಾರ ಒಮ್ಮೆ ಕೂಡ ಭೇಟಿ ನೀಡಿಲ್ಲ. ಗ್ರಾಮದಲ್ಲಿ ಘಟನೆ ನಡೆದ ನಂತರ ದಿನದಂದ ದಲಿತರನ್ನು ಬಹಿಷ್ಕಾರ ಹಾಕಿದ್ದಾರೆ. ದಿನನಿತ್ಯ ಅಗತ್ಯ ವಸ್ತುಗಳ ಹಾಗು, ಹೊಲ ಗದ್ದೆಗಳಲ್ಲಿ ಕೆಲಸ ಮಾಡಲು ಕರೆಯುತ್ತಿಲ್ಲ. ಕೂಡಲೇ ಜಿಲ್ಲಾ ಪೋಲಿಸ್ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಗಳು ಈ ಘಟನೆ ಬಗ್ಗೆ ಕ್ರಮ ಕೈಗೊಳ್ಳಬೇಕು ಇಲ್ಲವೇ ಎಲೆ ಕೂಡ್ಲಿಗಿ ಗ್ರಾಮದಿಂದ ಸಿಂಧನೂರುವರೆಗೆ ಪಾದಯಾತ್ರೆ ಮಾಡುವ ಮೂಲಕ ಹೋರಾಟ ಮಾಡಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಈ ಸಂಧರ್ಭದಲ್ಲಿ ದೊಡ್ಡಪ್ಪ ಮುರಾರಿ ಮಸ್ಕಿ.ಅಂಬ್ರೇಶ್ ಗಿರಿಜಾರಿ. ಅಶೋಕ ಮುರಾರಿ ಮಸ್ಕಿ.ಮಲ್ಲಿಕಾರ್ಜುನ ದೀನಸಮುದ್ರ.ನಿರುಪಾದಿ ಎಲೆ ಕೂಡ್ಲಿಗಿ.ಹನುಮಂತ ಹಂಪನಾಳ ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು..

Please follow and like us:

Related posts

Leave a Comment