ಸಿಂಧನೂರು: ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಪ್ರಮುಖ ಹಬ್ಬಗಳಲ್ಲೊಂದಾದ ಮೊಹರಂ ಹಬ್ಬ ಕೊರೋನ ದಿಂದ ಸಂಪೂರ್ಣ ಸ್ತಬ್ಧಗೊಂಡಿದೆ.ಈ ಬಾರಿ ಉತ್ತಮ ಮಳೆ- ಬೆಳೆಯಾಗಿದ್ದರಿಂದ ಮೊಹರಂ ಹಬ್ಬದ ಅದ್ಧೂರಿ ಆಚರಣೆ ಮುಂದಾಗಿದ್ದ ಜನತೆಗೆ, ಕೊರೋನ ಶಾಕ್ ನೀಡಿದೆ. ವೈರಸ್ ಭೀತಿಯಿಂದಾಗಿ ಜನರಲ್ಲಿ ಮೊಹರಂ ಸಂಭ್ರಮ ಇಲ್ಲದಂತಾಗಿದೆ. ಬಹುತೇಕ ಮಂದಿ ಮನೆಯಲ್ಲಿ ಇದ್ದು, ಸರಳ ಹಬ್ಬದಾಚರಣೆಗೆ ಮುಂದಾಗಿದ್ದಾರೆ. ಆದರೂ ಈ ಬಾರಿಯ ಮೊಹರಂ ಹಬ್ಬದ ಸಂಭ್ರಮ ಕಳೆಗುಂದಿದೆ.ಗೋನವಾರ ಗ್ರಾಮದಲ್ಲಿ 26 ವರ್ಷಗಳ ಹಿಂದೆ ಗ್ರಾಮದ ಗಫೂರ್ ತಾತಾನವರ ನೇತೃತ್ವದಲ್ಲಿ ಮೊಹರಂ ಹಬ್ಬ ಆಚರಣೆಯಿಂದ ಪ್ರವರ್ಧಮಾನಕ್ಕೆ ಬಂತು. 25 ವರ್ಷಗಳಿಂದ ಯಾವುದೇ ವಿಘ್ನವಿಲ್ಲದೆ ನಡೆದು ಬಂದ ಹಬ್ಬ ಈ ಮಹಾಮಾರಿಯಿಂದಾಗಿ ಹಬ್ಬ ಆಚರಿಸಲಾಗದೇ ಒಲ್ಲದ ಮನಸ್ಸಿನಿಂದ ಗ್ರಾಮಸ್ಥರು ಮನೆ ಸೇರಿದ್ದಾರೆ.ಇಲ್ಲಿನ ಧಾರ್ಮಿಕ ನಂಬಿಕೆ ಕೇವಲ ಮೊಹರಂ ಹಬ್ಬಕ್ಕೆ ಸೀಮಿತಗೊಂಡಿರಲಿಲ್ಲ. ವರ್ಷದ ಪ್ರತಿ ಗುರುವಾರ ಹಾಗೂ ಅಮವಾಸ್ಯೆ ದಿನ ವಿಶೇಷ ಪೂಜೆ ನಡೆಯುತ್ತಿತ್ತು ಎಂದು ಗಫೂರ್ ತಾತ ತಿಳಿಸಿದ್ದು, ವಿವಿಧ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ವಾರಕ್ಕೊಮ್ಮೆ ಆಗಮಿಸುತ್ತಿದ್ದರು. ಆದರೆ ವರ್ಷದ ಪ್ರಾರಂಭದಲ್ಲೇ ಈ ಕೊರೋನ ಬಂದು ಈ ಮೊಹರಂ ಸೇರಿದಂತೆ ವರ್ಷದ ಎಲ್ಲಾ ಪ್ರಮುಖ ಹಬ್ಬಗಳು. ವಿಶೇಷ ಪೂಜೆಗಳು ನಿಂತುಹೋಗಿವೆ.ಭಕ್ತರು ಯಾರು ಅನುಮಾನ ಪಡೆದ ತಮ್ಮ ಹರಿಕೆಗಳನ್ನು ಮುಂದಿನ ಮೊಹರಂಗೆ ತಿರಿಸಬಹುದು. ಕೊರೋನಾಗೆ ಹೆದರದೆ ಜಾಗೃತರಾಗಿ ಎಂದು ತಿಳಿಸಿದ್ದರು. ಕಳೆದ ಬಾರಿ ಮೊಹರಂ ನಲ್ಲಿ ಮೂರು ಪ್ರಮುಖ ಮಾತುಗಳನ್ನು ಗಫೂರ್ ತಾತ ನುಡಿದ್ದಿದ್ದರು ‘’ಗಂಗೆ ಧರೆಗೆ ಬರುತ್ತಾಳೆ’ ಎನ್ನುವುದು ಸತ್ಯವಾಗಿದೆ. ರಾಜ್ಯ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ. ಮಧ್ಯರಾತ್ರಿ ಭೂಮಿ ಅಲುಗಾಡತ್ತದೆ. ಎಂದರೆ. ಪ್ರಪಂಚಕ್ಕೆ ಆವರಿಸಿದ ಕೊರೋನ ಎಂಬ ವೈರಾಣು. ‘ಇಡಿ ಮುಂದಿಟ್ಟ ಹೆಜ್ಜೆ ಹಿಂದಕ್ಕೆ ಇಡಬಾರದು’ ಈ ಬಾರಿ ಮುಂಗಾರಿನ ಹತ್ತಿ. ಜೋಳ. ಸೂರ್ಯಕಾಂತಿ ಬೆಳೆಗಳು ಉತ್ತಮವಾಗಿ ಬೆಳೆದು ನಿಂತಿವೆ ಎಂದು ಗ್ರಾಮಸ್ಥರು ಹೇಳುತ್ತಾರೆ.
ವರದಿ-ಸೈಯದ್ ಬಂದೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು