ಆತ್ಮಹತ್ಯೆ ರೈತನ ಕುಟುಂಬಕ್ಕೆ ಧನಸಹಾಯ ನೀಡಿದ ಅಮೀನರೆಡ್ಡಿ ಯಾಳಗಿ…!

ಶಹಾಪುರ : ಸಾಲಬಾಧೆ ತಾಳಲಾರದೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಸಗರ ಗ್ರಾಮದಲ್ಲಿ ನಡುದಿದೆ.ಗ್ರಾಮದ ಚಂದ್ರಪ್ಪ ಸೇರಿ (51) ಎಂದು ತಿಳಿದು ಬಂದಿದೆ.ಆತ್ಮಹತ್ಯೆ ಮಾಡಿಕೊಂಡ ರೈತ ಇತ್ತೀಚೆಗೆ ಐದು ಲಕ್ಷ ರೂಪಾಯಿ ಸಾಲ ಮಾಡಿಕೊಂಡಿದ್ದರು ಎಂದು ಹೇಳಲಾಗುತ್ತಿದೆ. ಸಂಕಷ್ಟದಲ್ಲಿರುವ ರೈತನ ಕುಟುಂಬಕ್ಕೆ ಜೆಡಿಎಸ್ ಮುಖಂಡರಾದ ಅಮೀನ್ ರೆಡ್ಡಿ ಪಾಟೀಲ್ ಯಾಳಗಿ ಒಂದು ಲಕ್ಷ ರೂಪಾಯಿ ಧನಸಹಾಯ ನೀಡಿ ಸಾಂತ್ವನ ಹೇಳಿದರು.ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜಪ್ಪಗೌಡ ವಿಭೂತಿಹಳ್ಳಿ,ತಾಲ್ಲೂಕು ಪಂಚಾಯಿತಿ ಸದಸ್ಯರಾದ ಚಂದಪ್ಪ ಸೇರಿ,ತಿರುಪತಿ ಹತ್ತಿಕಟಿಗಿ,ಮಲ್ಲಿಕಾರ್ಜುನ್ ವಿರುಪಾಪುರ, ಬಸನಗೌಡ ಹಾರಣಗೇರಾ ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ವರದಿ-ಬಸವರಾಜ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment