ಸಾಕ್ಷರತೆಯಿಂದ ದೇಶ ಶಾಂತಿ ನೆಲೆಯೂರಲು ಸಾಧ್ಯ – ಮಲ್ಲಣ್ಣ ಹೊಸಮನಿ.

ಶಹಾಪುರ : ಪ್ರತಿಯೊಬ್ಬರಿಗೂ ಶಿಕ್ಷಣವನ್ನು ನೀಡುವುದರ ಜೊತೆಗೆ ಎಲ್ಲರ ಯೋಚನಾ ಶಕ್ತಿಯನ್ನು ಬೆಳೆಸುವುದರಿಂದ ಜಗತ್ತಿನಲ್ಲಿ ಶಾಂತಿ ನೆಲೆಯೂರಲು ಸಾಧ್ಯ ಎಂದು ಶಿರವಾಳ ವಲಯ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಲ್ಲಣ್ಣ ಹೊಸಮನಿ ಹೇಳಿದರು.ತಾಲ್ಲೂಕಿನ ಶಿರವಾಳ ಗ್ರಾಮ ಪಂಚಾಯಿತಿ ಹಾಗೂ ಲೋಕ ಶಿಕ್ಷಣ ಸಮಿತಿಯ ಆಶ್ರಯದಲ್ಲಿ ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಇಂದು ಅಂತಾರಾಷ್ಟ್ರೀಯ ಸಾಕ್ಷಿ ದಿನಾಚರಣೆ ಆಚರಿಸಿ ಮಾತನಾಡಿದರು.ಎಲ್ಲರಿಗೂ ಶಿಕ್ಷಣ ಎಂಬ ಆಶಯದಲ್ಲಿ ಪ್ರಾರಂಭವಾದ ಈ ದಿನ ಸಾಕ್ಷರತೆಯ ಜೊತೆಗೆ ಪ್ರತಿವರ್ಷ ಪ್ರತಿ ಒಂದೊಂದು ವಿಚಾರವನ್ನು ತೆಗೆದುಕೊಂಡು ವಿಶ್ವದಾದ್ಯಂತ ಅರಿವು ಮೂಡಿಸುವುದರ ಜತೆಗೆ ಈ ದಿನ ಆಚರಿಸಲಾಗುತ್ತದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಶಾಲಾ ಮುಖ್ಯ ಗುರುಗಳಾದ ಯಲ್ಲಪ್ಪ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ಮಡಿವಾಳಪ್ಪ ಪಂಚಾಯಿತಿ ಸಿಬ್ಬಂದಿ ಮಾಂಸ ಮಾದೇವಪ್ಪ ಪ್ರೇರಕ ಮಲ್ಲಣ್ಣ ಶಿಲ್ಪಾ ಪತ್ರಿಮಠ ಹಾಗೂ ಇತರರು ಉಪಸ್ಥಿತರಿದ್ದರು.

ವರದಿ- ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment