ರುದ್ರಭೂಮಿಗಾಗಿ ಮೀಸಲಿಟ್ಟ ಗ್ರಾಮಗಳಲ್ಲಿ ಸರ್ಕಾರಿ ಶಾಲೆ, ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಮಂಜೂರು..!

ಶಿರಾ: ಸರ್ಕಾರಿ ಯೋಜನೆ ವೃದ್ದಾಪ್ಯ ವೇತನಕ್ಕಾಗಿ ಇನ್ಮುಂದೆ ಕಚೇರಿಗಳಿಗೆ ಅಲೆಯುವಂತಿಲ್ಲ 60 ವರ್ಷ ದಾಟಿದ ಕೂಡಲೇ ಅರ್ಜಿ ಹಾಕದಿದ್ರೂ ಪಿಂಚಣಿ ಸಿಗಲಿದೆ,ಎಂದು ಕಂದಾಯ ಸಚಿವ ಆರ್ ಅಶೋಕ್ ತಿಳಿಸಿದ್ದಾರೆ.ಶಿರಾ ನಗರದಲ್ಲಿ ನೂತನ ಮಿನಿ ವಿಧಾನ ಸೌಧದ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ನಂತರ ಮಾತನಾಡಿದ ಆರ್ ಅಶೋಕ್ ಗ್ರಾಮೀಣ ಪ್ರದೇಶಗಳಲ್ಲಿ ನಮಗೆ ಬರುತ್ತೀರುವ ದೂರು ಎಂದರೆ ‘ಸ್ವಾಮಿ ನಮ್ಮ ಚಪ್ಪಲಿ ಸೇವೆದು ಹೋಗಿದಿಯೇ ಹೊರತು ಇದುವರೆಗೂ ಕೆಲಸ ಮಾತ್ರ ಯಾವುದು ಆಗಿಲ್ಲ ಎಂಬುವ ಮಾತು’ ಇದಕ್ಕಾಗಿಯೇ ಸರ್ಕಾರ ಈ ನೂತನ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಲ್ಲಿ ವೃದ್ದರು ವೇತನ ಪಡೆಯಲು ಕಚೇರಿಗೆ ಅಲೆಯುವಂತಿಲ್ಲ,ಅರ್ಜಿ ಕೂಡ ಹಾಕದಿದ್ರೂ ವೃದ್ದಾಪ್ಯ ವೇತನ ನೀಡುವ ಯೋಜನೆ ಈಗಾಗಲೇ ಉಡುಪಿ,ಬಳ್ಳಾರಿ ಜಿಲ್ಲೆಗಳಲ್ಲಿ ಪ್ರಾಯೋಗಿಕವಾಗಿದೆ.ಸುಮಾರು 10 ಸಾವಿರ ಮಂದಿಗೆ ಈ ಯೋಜನೆ ನೀಡಿದ್ದು, ಇದು ಯಶಸ್ಸಿಯಾಗಿದೆ.ಇದನ್ನು ರಾಜ್ಯದ ಎಲ್ಲಾ ಜಿಲ್ಲೆಯಲ್ಲೂ ಜಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ ತಿಳಿಸಿದರು.ಹಾಗೂ ನೂತನ ಕಟ್ಟಡ ವಿಶಾಲವಾಗಿದೆ ಇದರಲ್ಲಿ ಅಧಿಕಾರಿಗಳು ವಿಶಾಲವಾದ ಮನಸ್ಸಿನಿಂದ್ದ ಕೆಲಸ ಮಾಡಬೇಕು ಸುಮ್ಮನೆ ಕಾಲ ಹರಣ ಮಾಡುವುದು ಹಾಗೂ ಜನರಿಗೆ ತೊಂದರೆ ಕೊಡುವುದು ಕಂಡುಬಂದರೆ ನಮ್ಮ ಬಾಜಪ ಸರ್ಕಾರ ಯಾವುದೇ ಮುಲಾಜು ಇಲ್ಲದೆ ಕ್ರಮವನ್ನು ಕೈಗೊಳ್ಳಲಾಗುತ್ತದೆ.ವೃದ್ದಾಪ್ಯ ವೇತನ ಸರಿಯಾಗಿ ತಲುಪುತ್ತಿಲ್ಲ ಎಂಬ ದೂರುಗಳು ನಿತ್ಯ ಕೇಳಿಬರುತ್ತಿವೆ.ಅಂಚೆ ಕಚೇರಿಯಿಂದ ನಿಗದಿತ ಸಮಯಕ್ಕೆ ಸರಿಯಾಗಿ ವೃದ್ದರಿಗೆ, ಪಿಂಚಣಿ ತಲುಪುತ್ತಿಲ್ಲ,ಪಿಂಚಣಿ ತಲುಪಿಸಲು ಅಂಚೆ ಅಧಿಕಾರಿಗಳು ಕಮಿಷನ್ ಹಣ ಪಡೆಯುತ್ತಿದ್ದ ಮತ್ತು ಮೂರು ನಾಲ್ಕು ತಿಂಗಳಿಗೆ ಒಂದೇ ಬಾತ ನೀಡುವ ಪರಿ ಇದೆ ಮತ್ತು ಕೆಲವು ಕಡೆ ಪಿಂಚಣಿ ಹಣವನ್ನೆ ನುಂಗಿ ಹಾಕಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈಗಾಗಿ ಅಂಚೆ ಕಚೇರಿ ಬದಲಿಗೆ ಇನ್ಮುಂದೆ ಎಲ್ಲಾ ವೇತನಗಳ ಖಾತೆಯನ್ನು ಆಧಾರ್ ಗೆ ಲಿಂಕ್ ಮಾಡಿ ಭೋಗಸ್ ಖಾತೆಗಳನ್ನು ಪತ್ತೆ ಹಚ್ಚಿ ಅದನ್ನ ವಜಾಮಾಡಿ ನಿಜವಾದ ಫಲಾನುಭವಿಗೆ ಪೆನ್ಷನ್ ಹಣವನ್ನು ನೇರ ಅವರವರ ಬ್ಯಾಂಕ್ ಮೂಲಕ ಅವರ ಖಾತೆಗೆ ಹೋಗುವಂತೆ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮತ್ತು ಅರಣ್ಯ ಹಾಗೂ ಕಂದಾಯ ಇಲಾಖೆಗಳ ನಡುವೆ ಕೆಲ ಸಮಸ್ಯೆ ಬಗೆ ಹರಿದಿಲ್ಲ ಸದ್ಯದಲ್ಲಿ ಹೊಸ ರೀತಿಯ ಕಾನೂನನ್ನು ಜಾರಿಗೆ ತಂದು ಎಲ್ಲಾ ಪ್ರಕರಣಗಳಿಗೆ ಮಂಗಳ ಹಾಡುವ ನೂತನ ಕಾರ್ಯವನ್ನು ಅರಣ್ಯ ಸಚಿವರು ಜಾರಿಗೊಳಿಸುವ ಪ್ರಯತ್ನ ನಡೆದಿದೆ ಎಂದರು. ರಾಜ್ಯದ ಎಲ್ಲಾ ಹಳ್ಳಿಗಳಲ್ಲೂ ಸ್ಮಶಾನ ನಿರ್ಮಾಣ ಮಾಡಲು ಸರ್ಕಾರಿ ಜಾಗಗಳನ್ನು ಗರುತಿಸಿ ರುದ್ರಭೂಮಿಗಾಗಿ ಮೊದಲು ಮೀಸಲಿಟ್ಟ ಗ್ರಾಮಗಳಲ್ಲಿ ಸರ್ಕಾರಿ ಶಾಲೆ,ಆಸ್ಪತ್ರೆ ಇನ್ನಿತರೆ ಸರ್ಕಾರಿ ವ್ಯವಸ್ಥೆಗಳಿಗೆ ಜಮೀನು ಮಂಜೂರು ಮಾಡಿ ಉಳಿಕೆ ಜಮೀನನ್ನು ಬಗರ್ ಹುಕುಂ ಅರ್ಜಿದಾರರಿಗೆ ಜಮೀನು ಮಂಜೂರು ಮಾಡುವಂತೆ ನಮ್ಮ ಸರಕಾರಿ ಯೋಜನ ರೂಪಿಸಿದೆ.ಒಂದು ವರ್ಷದ ಅವದಿಯಲ್ಲಿ 3000 ಎಕರೆ ಜಮೀನನ್ನು ವಿವಿದ ಇಲಾಖೆಗಳಿಗೆ ನೀಡಿದ್ದೆನೆ, ಜಿಲ್ಲೆಯಲ್ಲೇ 310 ಎಕರೆ ನೀಡಿದ್ದೆನೆ ಈಗಾಗಿ ಅಧಿಕಾರಿಗಳು ಎಲ್ಲೆಲ್ಲಿ ಸರ್ಕಾರಿ ಜಾಗಗಳಿವೆ ಎಂಬುದನ್ನು ಪತ್ತೆ ಹಚ್ಚಿ ಸರ್ಕಾರಿ ಇಲಾಖೆಗಳಿಗೆ, ಶಾಲೆ ಆಸ್ಪತ್ರೆ ರುದ್ರ ಭೂಮಿಗಳಿಗೆ ಸರ್ಕಾರಿ ಜಾಗವನ್ನ ಮೀಸಲಿಡಿ ಎಂದರು. ಕಾರ್ಯಕ್ರಮದಲ್ಲಿ ತುಮಕೂರು ಉಸ್ತುವಾರಿ ಸಚಿವ ಮಾಧುಸ್ವಾಮಿ, ಅರಣ್ಯ ಸಚಿವ ಆನಂದ್ ಸಿಂಗ್.ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಜನಪ್ರತಿ ನಿಧಿಗಳು ಹಾಜರಿದ್ದರು..

ವರದಿ ಶ್ರೀಮಂತ್ ಎಕ್ಸ್ ಪ್ರೆಸ್ ಟಿವಿ ಶಿರಾ…

Please follow and like us:

Related posts

Leave a Comment