ಕರ್ನಾಟಕದಲ್ಲೂ ಕ್ಯಾಸಿನೋ ತೆರೆಯಲಿ: ಶಾಸಕ ಸುರೇಶ್ ಗೌಡ..!

ನಾಗಮಂಗಲ: ನಮ್ಮ ರಾಜ್ಯದ ಹಣವೆಲ್ಲ ಶ್ರೀಲಂಕದ ಕ್ಯಾಸಿನೋಗೆ ಹೋಗುತ್ತಿರುವುದನ್ನು ತಪ್ಪಿಸಲು ಕರ್ನಾಟಕದಲ್ಲೂ ಕ್ಯಾಸಿನೋ ತೆರೆಯುವ ಮೂಲಕ ರಾಜ್ಯದ ಆಧಾಯವನ್ನು ಹೆಚ್ಚಿಸಿಕೊಳ್ಳಲಿ ಎಂಬುದು ಸರ್ಕಾರಕ್ಕೆ ನನ್ನ ವೈಯಕ್ತಿಕ ಸಲಹೆ ಎಂದು ಶಾಸಕ ಸುರೇಶ್ಗೌಮಡ ತಿಳಿಸಿದರು. ಮಂಡ್ಯ ಜಿಲ್ಲೆ, ನಾಗಮಂಗಲ ತಾಲೂಕಿನ ಬೆಳ್ಳೂರು ಹೋಬಳಿಯ ಹಟ್ನ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಯಾರ್ಯಾರು ಹೆಚ್ಚು ದುಡ್ಡು ಮಾಡಿದಾರೋ ಅವರೆಲ್ಲರು ಶ್ರೀಲಂಕದಲ್ಲಿ ಹಣ ಕಳೆಯುತ್ತಿದ್ದಾರೆ. ಕೇವಲ ಜಮೀರ್ ಅಹಮ್ಮದ್ ಮಾತ್ರವಲ್ಲ, ರಾಜ್ಯದ ಬಹುತೇಕ ರಾಜಕೀಯ ನಾಯಕರುಗಳು ಕ್ಯಾಸಿನೋಗಳಿಗೆ ಹೋಗುವುದು ಸಾಮಾನ್ಯ. ಈ ಹೇಳಿಕೆಯಲ್ಲಿ ಸಂಶಯವಿದ್ದರೆ ಎಲ್ಲಾ ರಾಜಕೀಯ ನಾಯಕರುಗಳ ಪಾಸ್ಪೋನರ್ಟ್ ಪರಿಶೀಲಿಸಿದರೆ ನಿಜಾಂಶ ಹೊರಬಿಳುತ್ತದೆ. ಕ್ಯಾಸಿನೋದಲ್ಲಿ ದುಡ್ಡೊಂದಿದ್ದರೆ ಪ್ರಪಂಚದಲ್ಲಿರುವ ಎಲ್ಲಾ ಬಗೆಯ ವಸ್ತುಗಳು ಸಿಗುತ್ತವೆ. ಆದರೆ ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಈಗಷ್ಟೆ ಡ್ರಗ್ಸ್ ಕರ್ಮಕಾಂಡ ಹೊರಬೀಳುತಿದ್ದು ತನಿಖಾ ಹಂತದಲ್ಲಿದೆ. ಈ ವಿಚಾರದ ತನಿಖೆಯನ್ನು ನಿಷ್ಪಕ್ಷಪಾತವಾಗಿ ಸರ್ಕಾರ ನಡೆಸುತ್ತದೆ ಎಂಬ ವಿಶ್ವಾಸವಿದೆ ಎಂದರು.ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಜನರನ್ನು ದಿಕ್ಕು ತಪ್ಪಿಸುವ ದುರುದ್ದೇಶದಿಂದ ಅನೇಕ ಪ್ರಾಯೋಜಿತ ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸುತ್ತಿದೆ. ಕರೊನಾ ವಿಚಾರದಲ್ಲಿನ ಭ್ರಷ್ಟಾಚಾರದ ತಪ್ಪನ್ನು ಮುಚ್ಚುವ ಉದ್ದೇಶದಿಂದ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಂತಹ ಪ್ರಕರಣಗಳನ್ನು ಸೃಷ್ಟಿಸಿತು. ತದನಂತರ ಕೇಂದ್ರದ ಅನುದಾನ ತರುವಲ್ಲಿ ವಿಫಲವಾಗಿದ್ದನ್ನು ಮರೆಮಾಚಲು ಈಗ ಡ್ರಗ್ಸ್ ದಂಧೆಯ ಮೂಲಕ ನಾಡಿನ ಜನತೆಯ ಗಮನವನ್ನು ಬೇರೆಡೆ ಸೆಳೆಯುವತ್ತ ನಿರತವಾಗಿದೆ ಎಂದು ಸರ್ಕಾರದ ನಡೆಯ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು.

ವರದಿ- ಎಸ್.ವೆಂಕಟೇಶ್.ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment