ಮರ ಹತ್ತಿ ಕುಳಿತಿದ್ದ ತಹಶಿಲ್ದಾರ್ ರಕ್ಷಿಸಿದ ಅಗ್ನಿಶಾಮಕದಳ…!

ಕಲಬುರಗಿ : ನೀರಿನ ರಭಸಕ್ಕೆ ಸಿಲುಕಿ ಮರ ಹತ್ತಿ ಕುಳಿತಿದ್ದ ಯಾದಗಿರಿ ತಹಶಿಲ್ದಾರ್ ರಕ್ಷಣಾ ಕಾರ್ಯ ಯಶಸ್ವಿಯಾಗಿದೆ. ಯಡಗಿರಿಯಿಂದ ಬೀದರ್ಗೆ ಹೊರಟಿದ್ದ ತಹಶಿಲ್ದಾರ್ ಪಂಡಿತ್ ಬಿರಾದಾರ್, ಚಿಂಚೋಳಿಯ ಗಣಾಪುರ ಬಳಿ ದಾಟುವಾಗ ನೀರಿನ ರಭಸಕ್ಕೆ ಹೆಚ್ಚಾದಾಗ ಕಾರಿನಿಂದ ಇಳಿದು ಮರ ಹತ್ತಿದ್ದಾರೆ. ನೀರಿನ ರಭಸಕ್ಕೆ ಕೆಲವೇ ಕ್ಷಣಗಳಲ್ಲಿ ಕಾರು ಕೊಚ್ಚಿಕೊಂಡು ಹೋಗಿದೆ. ತಕ್ಷಣವೇ ಕಾರ್ಯಚಾರಣೆಗೆ ಇಳಿದ ತಾಲೂಕು ಆಡಳಿತ ತಹಶಿಲ್ದಾರ್ ಪಂಡಿತ್ ಬಿರಾದಾರ್ ಅವರನ್ನ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ವರದಿ-ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment