ಖಾಲಿ ನಿವೇಶನದಲ್ಲಿ ಬೆಳೆದಿದ್ದ ಗಾಂಜಾ ವಶ…!

ಕಲಬುರಗಿ: ಕಲಬುರಗಿ ಜಿಲ್ಲೆಯ ಮಹಾರಾಷ್ಟ ಗಡಿಯಲ್ಲಿರುವ ಆಳಂದ ತಾಲೂಕಿನ ಹಿರೋಳಿಯಲ್ಲಿ ಖಾಲಿ ನಿವೇಶನದಲ್ಲಿ ಅಕ್ರಮವಾಗಿ ಬೆಳೆದ ಗಾಂಜಾವನ್ನು ಡಿಎಸ್ಪಿ ಮಲ್ಲಿಕಾರ್ಜುನ ಸಾಲಿ ಮತ್ತು ತಹಸೀಲದಾರ ದಯಾನಂದ ಪಾಟೀಲ ತಂಡ ದಾಳಿ ನಡೆಸಿ ಗಾಂಜಾ ಗಿಡಗಳು ವಶಪಡಿಸಿಕೊಂಡರು. ಪಿಎಸ್ಐ ಇಂದುಮತಿ ಜಾಧವ ಸೇರಿದಂತೆ ಅನ್ಯರು ಇದ್ದಾರೆ. ಹಿರೋಳಿಯ ಗಾಂಜಾ ಹೊಲಕ್ಕೆ ದಾಳಿ : ಎರಡುವರಿ ಕೆಜಿ ಗಾಂಜಾ ಬೆಳೆ ವಶ ಮಹಾರಾಷ್ಟçದ ಗಡಿಯಲ್ಲಿರುವ ಆಳಂದ ತಾಲೂಕಿನ ಹಿರೋಳಿಯಲ್ಲಿ ಬುಧವಾರ ಖಾಲಿ ನಿವೇಶನದಲ್ಲಿ ಬೆಳೆದ ಗಾಂಜಾವನ್ನು ತಹಸೀಲದಾರ, ಡಿಎಸ್ಪಿ, ಮಾ.ಹಿಪ್ಪರಗಾ ಪೊಲೀಸ್ ಠಾಣೆಯ ಪಿಎಸ್ಎ ಮತ್ತು ಸಿಬ್ಬಂಧಿ ದಾಳಿಮಾಡಿ ಅಕ್ರಮವಾಗಿ ಬೆಳೆದ ಗಾಂಜಾ ಗಿಡಗಳನ್ನು ವಶಪಡಿಸಿ ಕೊಂಡಿದ್ದಾರೆ.ಈ ಕುರಿತು ಮಾತನಾಡಿದ ಆಳಂದ ಡಿಎಸ್ಪಿ ಮಲ್ಲಿಕಾಜುನ್ ಸಾಲಿ ಮಾಹಿತಿ ನೀಡಿದ್ದು ಹೀಗೆ, ಹಿರೋಳಿಯ ಸರಕಾರಿ ದವಾಖಾನೆಯ ಹಿಂದಿರುವ ತನ್ನ ಖಾಲಿ ನಿವೇಶನದಲ್ಲಿ ಬಂದೇನವಾಜ ಅಬ್ದುಲ್ ಲಂಗಡೆ (೪೮) ಅಕ್ರಮವಾಗಿ ಗಾಂಜಾಗಿಡಗಳು ಬೆಳೆದಿದ್ದು ಅವು ಇನ್ನು ದೊಡ್ಡದಾಗುವ ಹಂತದಲ್ಲಿದ್ದವು. ೧೪ ಗಿಡಗಳ ಒಟ್ಟು ತೂಕ ೨ಕೆಜಿ ೫೪೦ ಗ್ರಾö್ಯಂ ಆಗಿದ್ದು ಅದರ ಅಂದಾಜು ಬೆಲೆ ೧೫ ಸಾವಿರ ರೂಗಳು. ಅದನ್ನು ವಶಪಡಿಸಿ ಕೊಂಡು ಅಪರಾಧಿಯನ್ನು ಬಂಧಿಸಲಾಗಿದೆ ಎಂದರು. ಮಾದನ ಹಿಪ್ಪರಗಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕೊಂಡಿದ್ದು ಎಸ್ಪಿ ಮರಿಯಮ್ಮ ಜಾರ್ಜ ಮಾರ್ಗದರ್ಶನದಲ್ಲಿ , ದಿಎಸ್ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ಹೆಚ್ಚಿನ ತನಿಖೆ ಮಾಡಲಾಗುವದು ಎಂದು ಪಿಎಸ್ಐ ಇಂದುಮತಿ ಹೇಳಿದರು.ಈ ಕುರಿತು ಮಾತನಾಡಿದ ತಹಸೀಲದಾರ ದಯಾನಂದ ಪಾಟೀಲ, ಇದೇ ರೀತಿ ತಾಲೂಕಿನ ಇನ್ನು ಕೆಲವೆಡೆ ಗಾಂಜಾ ಗಿಡಗಳು ಬೆಳೆದಿರುವ ಸಾಧ್ಯತೆ ಇದ್ದು ಅವುಗಳನ್ನು ಪತ್ತೆ ಹಚ್ಚಿ ದಾಳಿ ಮಾಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ವರದಿ- ಡಾ.ರಾಜಕುಮಾರ ಹಿರೇಮಠ ಎಕ್ಸ್ ಪ್ರೆಸ್ಸ್ ಟಿವಿ ಆಳಂದ

Please follow and like us:

Related posts

Leave a Comment