ನರೇಂದ್ರ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಪೌರ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಣೆ..!

ಮಳವಳ್ಳಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ 70 ನೇ ಹುಟ್ಟು ಹಬ್ಬವನ್ನು ಮೋದಿ ಅಪ್ಪಟ ಅಭಿಮಾನಿ ಮೋದಿ ರವಿಯವರು ಮಳವಳ್ಳಿ ತಾಲ್ಲೂಕಿನ ಹಲಗೂರು ಗ್ರಾಮದ ಭಿಕ್ಷದ ಮಠದ ಕಛೇರಿಯಲ್ಲಿ ಪೌರ ಕಾರ್ಮಿಕರಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಲಾಯಿತು. ನಂತರ ಮಾತನಾಡಿದ ಅಪ್ಪಟ ಅಭಿಮಾನಿಯಾದ ಮೋದಿ ರವಿಯವರು ನರೇಂದ್ರ ಮೋದಿ ಯವರು ದೇಶದ ಪ್ರಧಾನಿಯಾಗಿ ಹಲವಾರು ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ಬೆಂಬಲಕ್ಕೆ ಇಡೀ ದೇಶ ಜೊತೆಗಿದೆ. ಎಲ್ಲಾ ಹೋಬಳಿಗಳಲ್ಲೂ ಬಿಜೆಪಿ ಪಕ್ಷವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ 2023 ರ ವಿಧಾನ ಸಭೆಯಲ್ಲಿ ಮತ್ತೊಮ್ಮೆ ಗೆಲುವು ಸಾಧಿಸಲು ನಿಷ್ಠಾವಂತ ಕಾರ್ಯ ಕರ್ತರು ಶ್ರಮಿಸಬೇಕು ಎಂದರು.ಈ ಸಂದರ್ಭದಲ್ಲಿ ತಾಲ್ಲೂಕು ಮಾಜಿ ಅದ್ಯಕ್ಷ ಶಿವಸ್ವಾಮಿ, ತಾಲ್ಲೂಕು ಉಪಾಧ್ಯಕ್ಷ ನಾಗೇಶ್, ಕುಮಾರ್, ಮುಖಂಡರಾದ ಪ್ರೇಮಾ ಕುಮಾರಿ, ಕೃಷ್ಣೇಗೌಡ, ಉಡುಪಿ ಹೋಟೆಲ್ ಬಾಲಚಂದ್ರ,ಗಂಗಾಧರ್ ಲಿಂಗಪಟ್ಟಣ, ರಾಜಣ್ಣ, ರವಿ ಮೋದಿ, ಶಿವಕುಮಾರ್, ಪ್ರದೀಪ್, ವೇದಮೂರ್ತಿ, ವಿನಯ್, ಮಹೇಶ್ ಸೇರಿದಂತೆ ಹಲವರು ಇದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment