ಮತದಾರರಲ್ಲದವರಿಂದ ನಾಮಪತ್ರ ಸಲ್ಲಿಕೆಯ ವಿಫಲ ಯತ್ನ..!

ನಾಗಮಂಗಲ : ರಾಜಕೀಯ ಜಿದ್ದಾಜಿದ್ದಿಗೆ ಮತ್ತೊಂದು ಹೆಸರಾದ ಮಂಡ್ಯ ಜಿಲ್ಲೆಯ ನಾಗಮಂಗಲದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ನಿಜಕ್ಕೂ ಸಾಕ್ಷೀಕರಿಸುತ್ತಿದೆ. ನಾಮಪತ್ರ ಸಲ್ಲಿಸಲು ಕೊನೆಯ ದಿನವಾದ ಮಂಗಳವಾರ ಮತದಾರರ ಪಟ್ಟಿಯಲ್ಲಿ ಇಲ್ಲದವರು ನಾಮಪತ್ರ ಸಲ್ಲಿಕೆಗೆ ಮುಂದಾಗಿದ್ದು ಮತ್ತು ಸಂಘದ ಕಾರ್ಯದರ್ಶಿ ಅಂತವರ ನಾಮಪತ್ರ ಸಲ್ಲಿಕೆಗೆ ಸಹಕರಿಸಿದ್ದು ವಿಶ್ವಶ್ರೇಷ್ಠ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಸಹಕಾರ ಸಂಘಗಳ ಕಾಯ್ದೆಯ ಉಲ್ಲಂಘನೆಗೆ ಸಂಘದ ಕಚೇರಿ ಆವರಣ ಸಾಕ್ಷಿಯಾಗಿದೆ. ಇದೇ. ಸೆ.18 ರಿಂದ ಪ್ರಾರಂಭವಾದ ನಾಮಪತ್ರ ಸಲ್ಲಿಕೆಗೆ ಸೆ.22 ರ ಮಂಗಳವಾರ ಮಧ್ಯಾಹ್ಮ 03 ಗಂಟೆ ಅಂತಿಮ ದಿನದ ವೇಳೆಯಾಗಿತ್ತು. ಅದರಂತೆ ಸಮಯ ಮುಗಿದ ನಂತರ ಪೂರ್ವ ನಿಗಧಿಯಂತೆ ಮಾಜಿ ಶಾಸಕ ಚಲುವರಾಯಸ್ವಾಮಿ ಬಣದವರಿಂದ ಚುನಾವಣಾಧಿಕಾರಿ ತಹಸೀಲ್ದಾರ್ ಅನುಪಸ್ಥಿತಿಯಲ್ಲಿ ನಿಯಮಬಾಹಿರ ನಾಮಪತ್ರ ಸಲ್ಲಿಕೆಗೆ ಮುಂದಾದರು.ಇದನ್ನರಿತ ಶಾಸಕ ಸುರೇಶ್ ಗೌಡರ ಬಣದ ಕಾರ್ಯಕರ್ತರು ಏಕಪಕ್ಷೀಯ ಕಾರ್ಯವೈಖರಿಯನ್ನು ಪ್ರಶ್ನಿಸಿದರು.ಇದರಿಂದ ಎರಡು ಕಡೆಯವರಿಂದಲೂ ಮಾತಿನ ಚಕಮಕಿ ತಾರಕಕ್ಕೇರಿತು. ತೀವ್ರ ಮಾತಿನ ಚಕಮುಕಿ ನಡದು ನಂತರ ಕೈ ಕೈ ಮಿಲಾಯಿಸುವ ಹಂತಕ್ಕೆ ತಲುಪಿದ ವಾಗ್ಯುದ್ದ. ಟೇಬಲ್ ಕುಟ್ಟುವ ಮೂಲಕ ತಮ್ಮ ಪ್ರತಿಷ್ಟೆ ಪ್ರದರ್ಶನಕ್ಕೆ ಮುಂದಾದ ಎರಡು ಬಣದ ಬೆಂಬಲಿಗರನ್ನು ತಹಸೀಲ್ದಾರ್ ಸಮಾಧಾನಪಡಿಸಲು ಮುಂದಾದರು. ಕರ್ತವ್ಯ ಲೋಪವೆಸಗಿದ ಸಿಬ್ಬಂದಿಯನ್ನು ಅಮಾನತುಗೊಳಿಸುವಂತೆ ಪಟ್ಟುಹಿಡಿದರು. ತಕ್ಷಣ ಕಾರ್ಯಪ್ರವೃತರಾದ ಚುನಾವಣಾಧಿಕಾರಿ ತಹಸೀಲ್ದಾರ್ ಕುಂಞ ಅಹಮ್ಮದ್, ಮತದಾರರ ಪಟ್ಟಿಯಲ್ಲಿ ಹೆಸರಿಲ್ಲದವರಿಗೆ ನಾಮಪತ್ರ ಸಲ್ಲಿಸಲು ಅವಕಾಶವಿಲ್ಲ ಎಂದು ಸಲ್ಲಿಕೆಗೆ ಮುಂದಾಗಿದ್ದ ನಾಮಪತ್ರಗಳನ್ನು ಪರಿಗಣಿಸಲಿಲ್ಲ.

ವರದಿ- ಎಸ್.ವೆಂಕಟೇಶ್. ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment