ಪಿಂಚಣಿಗಾಗಿ ಧರಣಿ- ವಯೊ ವೃದ್ದರಿಗೆ ವರ್ಷ ಕಳೆದರೂ ಸಿಗದ ಪಿಂಚಣಿ…!

ವಿಜಯಪುರ: ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ವಿವಿಧ ಗ್ರಾಮದ ವಯೊ ವೃದ್ದರು, ನಿರ್ಗತಿಕರು, ಅಂಗವಿಕಲರು, ಮನಸ್ವಿಯಂತಹ ಸರಕಾರದ ಯೋಜನೆಗಳಿಗೆ ಅರ್ಜಿ ಸಲ್ಲಿಸಿ ಪಿಂಚಣಿಗಾಗಿ ದಿನ ನಿತ್ಯ ಕಚೇರಿಗೆ ಅಲೆದಾಟ ಮಾಡುತ್ತಿದ್ದಾರೆ. ಕಚೇರಿಗಳಲ್ಲಿ ಸುಳ್ಳಿನ ಮಾತುಗಳೇ ಹೆಚ್ಚು ಎಷ್ಟು ಬಾರಿ ಅರ್ಜಿಗಳು ಸಲ್ಲಿಸಿದರೂ ಮತ್ತೇ ಮತ್ತೇ ಅರ್ಜಿಸಲು ಹೇಳುತ್ತಾರೆ. ಇಂದು ನಮಗೆ ನ್ಯಾಯ ಸಿಗಲೇಬೇಕು ಎಂದು ವಯೋವೃದ್ಧರು ಕಂದಾಯ ಇಲಾಖೆಯಲ್ಲಿನ ಕೊಣೆಯ ಎದುರು ಸುಮಾರು 4 ಘಂಟೆಯ ಧರಣಿ ಮಾಡಿದ್ರು. ಇಂತಹ ಸಂದರ್ಭದಲ್ಲಿ ಸ್ಥಳಕ್ಕೆ ಧಾವಿಸಿದ ಇಂಡಿ ತಾಲ್ಲೂಕು ಜೆಡಿಎಸ್ ಪಕ್ಷದ ಅಧ್ಯಕ್ಷ ಬಿ.ಡಿ.ಪಾಟೀಲ್ ಮಾತಾನಾಡಿ ಅಧಿಕಾರಿಗಳು ಏನು ಮಾಡುತ್ತಾರೊ, ಯಾರ ಕೆಲಸ ಮಾಡುತ್ತಾರೊ, ಇವರಿಗೆ ಯಾರು ಹೇಳವರು ಇಲ್ಲ. ಕೇಳುವರು ಇಲ್ಲ,ಇಡೀ ಜಗತ್ತಿಗೆ ಕಾಳಗಿಚ್ಚಿನಂತೆ ಕೊರೊನಾ ಮಹಾಮಾರಿ ಹಬ್ಬುತ್ತಿದೆ. ಆದರೆ ಇಂತಹ ಅಧಿಕಾರಿಗಳು ಯಾವ ಉದ್ದೇಶದಿಂದ ಇಂತಹ ಮುಗ್ದ ಜನರನ್ನು ಕಾಡುತ್ತಾರೊ ಗೊತ್ತಿಲ್ಲ. ಈ ಕೂಡಲೇ ಅಧಿಕೃತ ಎಚ್ಚೇತ್ತುಕೊಂಡು ಸೂಕ್ತ ರೀತಿಯಲ್ಲಿ ಸಾರ್ವಜನಿಕರಿಗೆ ಸೇವೆ ಒದಗಿಸಬೇಕು ಒಂದು ವೇಳೆ ತಮ್ಮ ಕುಂಟ ನೆಪವೊಡ್ಡಿದರೆ ತೊರಿಸಿದ್ರೆ ಉಗ್ರ ಹೋರಾಟಕ್ಕೆ ಮುಂದಾಗುತ್ತೆನೆ ಎಂದು ತಿಳಿಸಿದರು.

ವರದಿ- ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment