ಚುನಾವಣೆ ಬೆನ್ನಲ್ಲೆ ಮಾರುತಿ ಮೊರೆ ಹೋದ ಜೆಡಿಎಸ್ ಕಾರ್ಯಕರ್ತರು..!

ನಾಗಮಂಗಲ: ಯಾವುದೇ ಒಂದು ಚುನಾವಣೆ ಎಂದರೆ ನಾಗಮಂಗಲದ ರಾಜಕೀಯ ಜಿದ್ದಾಜಿದ್ದಿನ ಕಾಳಗ ಇಡೀ ರಾಜ್ಯದಲ್ಲೆ ಮನೆ ಮಾತು. ಮುಂದಿನ ಕೆಲವೇ ದಿನಗಳಲ್ಲಿ ನೆಡೆಯುವ ಗ್ರಾಮ ಪಂಚಾಯ್ತಿ ಸಾರ್ವತ್ರಿಕ ಚುನಾವಣೆಗೆ ಸ್ಥಳೀಯ ಸಹಕಾರ ಸಂಘಗಳ ಚುನಾವಣೆ ಮುನ್ನುಡಿ. ಈ ನಿಟ್ಟಿನಲ್ಲಿ ಇದೇ ಸೆ.30 ರಂದು ನಡೆಯುವ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಚುನಾವಣೆ ಹೊರತಾಗಿಲ್ಲ. ನಾಮಪತ್ರ ಹಿಂತೆಗೆಯಲು ಕೊನೆಯ ದಿನವಾದ ಸೆ.24 ರ ಗುರುವಾರ ಅವಿರೋಧವಾಗಿ 4 ಸ್ಥಾನಗಳನ್ನು ತಮ್ಮದಾಗಿಸಿಕೊಳ್ಳುವ ಮೂಲಕ ಶುಭಾರಂಭದ ನಗೆ ಬೀರಿದ್ದ ಮಾಜಿ ಶಾಸಕ ಚೆಲುವರಾಯಸ್ವಾಮಿ ಬಣದ ವಿರುದ್ದ ಸೇಡು ತೀರಿಸಿಕೊಳ್ಳಲು ಹಾಲಿ ಶಾಸಕ ಸುರೇಶ್ ಗೌಡರ ಬಣದ ಅಭ್ಯರ್ಥಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಚುನಾವಣಾ ಪ್ರಚಾರಕ್ಕೆ ಪ್ರಾರಂಭ ಮಾಡುವ ಸಂಪ್ರದಾಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಟಿಬಿ ಬಡಾವಣೆಯ ಗಣಪತಿಗೆ ಕೈ ಮುಗಿದರೆ, ಜೆಡಿಎಸ್ ಕಾರ್ಯಕರ್ತರು ಪಟ್ಟಣ ವ್ಯಾಪ್ತಿಯ ಉಪ್ಪಾರಹಳ್ಳಿಯ ಮಾರುತಿಗೆ ಮೊರೆ ಹೋಗುವ ಮೂಲಕ ಮತದಾರರ ಮನೆಯ ಬಾಗಿಲು ತಟ್ಟುತಿದ್ದಾರೆ.ಮಾರುತಿಗೆ ಪೂಜೆ ಸಲ್ಲಿಸಿದ ನಂತರ ಮಾತನಾಡಿ ಶಾಸಕ ಸುರೇಶ್ ಗೌಡರ ಬೆಂಬಲಿತ ಬಣದ ಅಭ್ಯರ್ಥಿ ಬಿಂಡೇನಹಳ್ಳಿ ಕೃಷ್ಣೇಗೌಡ,ಇದೇ ಪ್ರಥಮ ಬಾರಿಗೆ ಚುನಾವಣೆಗೆ ಸ್ಪರ್ಧಿಸಲು ಹೊಸ ಮುಖಗಳಿಗೆ ಅವಕಾಶವಾಗಿರುವುದು ಈ ಹಿಂದಿನ ಆಡಳಿತ ಮಂಡಳಿಯ ಅಕ್ರಮಗಳನ್ನು ಬಯಲಿಗೆಳೆಯಲು ಸಿಕ್ಕಿರುವ ಸದಾವಕಾಶ. ರೈತ ಪರ ಹೋರಾಟವೇ ತನ್ನ ಸಿದ್ದಾಂತವಾಗಿರುವ ಜೆಡಿಎಸ್ ಪಕ್ಷದ ಪರವಾಗಿ ಸ್ಪರ್ಧಿಸಿರುವ ನಮ್ಮ ಬಣದ ಅಭ್ಯರ್ಥಿಗಳನ್ನು ರೈತ ಮತದಾರರು ಗೆಲ್ಲಿಸುವ ವಿಶ್ವಾಸವಿದೆ. ಸುರೇಶ್ ಗೌಡರ ಜನಪರ ಆಡಳಿತ ನಮ್ಮ ಗೆಲುವಿಗೆ ಶ್ರೀರಕ್ಷೆಯಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವರದಿ- ಎಸ್.ವೆಂಕಟೇಶ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ.

Please follow and like us:

Related posts

Leave a Comment