ಡ್ರಗ್ಸ್ ಜಾಲ, ನಿಷ್ಪಕ್ಷಪಾತದ ತನಿಖೆ ನಡೆಸುವಂತೆ ಜಿಲ್ಲಾ ಜನಜಾಗ್ರತಿ ವೇದಿಕೆ ಆಗ್ರಹ…!

ಮಾದಕ ವಸ್ತುಗಳ ಪ್ರಕರಣ ದಿನದಿಂದ ದಿನಕ್ಕೆ ತುಂಬಾ ಆಳದವರೆಗೆ ಪಸರಿಸಿದ್ದು , ಅದರ ಬೇರುಗಳು ತುಂಬಾ ಅಳಕ್ಕೂ ಇಳಿದಿವೆ, ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮ ಕುರಿತು ಯುವಜನರಲ್ಲಿ ಜಾಗ್ರತಿ ಮೂಡಿಸಬೇಕು, ಶಾಲಾ ಕಾಲೇಜುಗಳಲ್ಲಿ ಮಾದಕ ವಸ್ತುಗಳ ಕರಿ ಛಾಯೆ ಬೀಳದಂತೆ ಎಚ್ಚರವಹಿಸಬೇಕಾಗಿದೆ. ವಿದ್ಯಾರ್ಥಿ ಗಳಿಗೆ ಮಾದಕ ವಸ್ತುಗಳು ಪೂರೈಕೆಯಾಗುತ್ತಿರುವದು ಆತಂಕಕಾರಿಯ ಬೆಳವಣಿಗೆಯಾಗಿದೆ ,ಈ ಕುರಿತಂತೆ ಶಾಲಾ ಕಾಲೇಜುಗಳ ಆವರಣದೊಳಗೆ ಹೊರಗೆ ಡ್ರಗ್ ಅಪಾಯ ತಪ್ಪಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು. ಸಾಂಸ್ಕೃತಿಕ ವಲಯದಲ್ಲೂ ಮಾದಕ ವಸ್ತುಗಳ ಬಳಕೆ ಯಾಗುತ್ತಿರುವುದು ,ದುರದೃಷ್ಟಕರವಾಗಿದೆ, ಅಂತರಾಜಾಲವನ್ನು ಬಳಸಿಕೊಂಡು ಡ್ರಗ್ಸ್ ಮಾರಾಟ ದಂದೇ ನಡೆಸುತ್ತಿರುವ ಪ್ರಕರಣಗಳು ಬೆಳಕಿಗೆ ಬಂದಿವೇ.ಆದ್ದರಿಂದ ಸಿನಿಮಾ ಮತ್ತು ಸಾಂಸ್ಕೃತಿಕ ರಂಗದಲ್ಲಿ ಮಾದಕ ವಸ್ತುಗಳ ನಂಟಿನ ಜನರನ್ನು ನಿಷ್ಪಕ್ಷಪಾತ ತನಿಖೆಗೆ, ಒಳಪಡಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ,ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ಮುಖ್ಯ ಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.ಈ ಸಂದರ್ಭದಲ್ಲಿ ಜಿಲ್ಲಾ ಜನ ಜಾಗ್ರತಿ ವೇದಿಕೆಯ ಅಧ್ಯಕ್ಷ ರಾದ ಶ್ರೀಮತಿ ಶಶಿಕಲಾ ಭೋವಿ ,ನಿಕಟ ಪೂರ್ವ ಅಧ್ಯಕ್ಷರಾದ ಬಸವರಾಜ್ ಪಾಟೀಲ ,ಮಹ್ಮದ್ ರಫಿ , ಶ್ರೀ, ಕ್ಷೇ, ಧ, ಗ್ರಾ, ಯೋಜನೆ ಬಿ ಸಿ ಟ್ರಸ್ಟ್ ನಿರ್ದೇಶಕ ಮತ್ತು ಜಿಲ್ಲಾ ಜನಜಾಗ್ರತಿ ವೇದಿಕೆಯ ಕಾರ್ಯದರ್ಶಿಗಳಾದ ಸಂತೋಷ ಕುಮಾರ್. ಸದಸ್ಯರಾದ ಸುಭಾಷ್ ಚಂದ್ರಪಾಟೀಲ್,ಶರಣಪ್ಪ ಹುಣಸಾಗಿ, ಚನ್ನಪಾ ಬುದಿಹಳ, ರಾಜಶೇಕರಯ್ಯ, ಹಿರೇಮಠ ,ಶ್ರಿಮತಿ ತೋಟಮ್ಮ ,ಜ್ಞಾನ ನ ಗೌಡ, ಮತ್ತು ಯೋಜನೆಯ ಯೋಜನಾಧಿಕಾರಿಗಳಾದ ಮಯೂರ ಎನ್ ತೋರಸ್ಕರ , ಹನುಮಂತ ನಾಯಕ್ , ಪಾಂಡುM ಗೌಡ ,ರಘುಪತಿ, ಜಿ ,ಉಮೇಶ್ ಪೂಜಾರಿ, ಮತ್ತು ಜನ ಜಾಗ್ರತಿ ವೇದಿಯ ಯೋಜನಾಧಿಕಾರಿ ಮಾಧವ ಮುಂತಾದವರು ಉಪಸ್ಥಿತರಿದ್ದರು.

ವರದಿ- ಸುಲ್ತಾನ್ ಬಾಬ ಎಕ್ಸ್ ಪ್ರೆಸ್ ಟಿವಿ ರಾಯಚೂರು

Please follow and like us:

Related posts

Leave a Comment