ಜೆಡಿಎಸ್ ನಗರಸಭೆ ಸದಸ್ಯನ ಕೊಚ್ಚಿ ಕೊಲೆ..!

ರಾಯಚೂರು : ನಗರಸಭೆ ಸದಸ್ಯನೊಬ್ಬನನ್ನ ನಡು ರಸ್ತೆಯಲ್ಕೇ ಭೀಕರವಾಗಿ ಕೊಲೆ ಮಾಡಿರುವ ಘಟನೆ ರಾಯಚೂರಿನಲ್ಲಿ ನಡೆದಿದೆ. ನಗರದ ಜಾಕೀರ್ ಹುಸೇನ್ ವೃತ್ತದ ಬಳಿ ಘಟನೆ ನಡೆದಿದ್ದು,ಮಕ್ಬೂಲ್ ಕೊಲೆಯಾದ ಜೆಡಿಎಸ್ ನಗರಸಭೆ ಸದಸ್ಯ. ನಿನ್ನೆ ರಾತ್ರಿ ಐದು ಜನ ದುಷ್ಕರ್ಮಿಗಳು ಮಕ್ಬೂಲ್, ಅವರ ಮೇಲೆ ಏಕಾಏಕಿ ಮಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಘಟನೆಯಿಂದ ತೀವ್ರವಾಗಿ ಅಸ್ವಸ್ಥಗೊಂಡ ನಗರಸಭೆ ಸದಸ್ಯನನ್ನ ಸ್ಥಳೀಯ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲೇ ಮಕ್ಬೂಲ್ ಮೃತಪಟ್ಟಿದ್ದಾರೆ. ಅಲ್ಲದೇ ಈ ಹಿಂದೆ ಮಕ್ಬೂಲ್ ಸಹೋದರ ಕೂಡ ಕೊಲೆಯಾಗಿದ್ದು,ಹಳೇ ವೈಣಮ್ಯದ ಹಿನ್ನೆಲೆ ಕೊಲೆಯಾಗುರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ರಾಯಚೂರು ಎಸ್ಪಿ ಪ್ರಕಾಶ್ ನಿಕ್ಕಂ ಭೇಡಿ ನೀಡಿ,ಪರಿಶೀಲನೆ ನಡೆಸಲಾಗಿದೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ- ಸುಪ್ರಿಯಾಶರ್ಮಾ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment