ಕಗ್ಗತ್ತಲೆಯಲ್ಲಿ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ..!

ರಾಯಾಚೂರು: ಕಳೆದ ಮೂರು ದಿನಗಳಿಂದ ಈಚನಾಳ ಕ್ರಾಸ್ ನಲ್ಲಿ ಟ್ರಾನ್ಸಪಾರ್ಮರ್ ಕೆಲ ತಾಂತ್ರಿಕ ಕಾರಣದಿಂದ ಕಾರ್ಯ ಸ್ಥಗಿತಗೊಂಡಿದೆ. ಇದರಿಂದಾಗಿ ಈಚನಾಳ ಕ್ರಾಸ್ ನಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಕೂಡ ಕತ್ತಲಲ್ಲಿ ಕಾರ್ಯ ನಿರ್ವಹಿಸಬೇಕಾದ ಅನಿವಾರ್ಯತೆ ಎದುರಾಗಿದೆ. ರಾಯಚೂರು ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿರುವ ಈ ಆಸ್ಪತ್ರೆಗೆ 28 ರಿಂದ 30 ಹಳ್ಳಿಗಳು ಒಳಪಟ್ಟಿದ್ದು, 24/7 ಹೆರಿಗೆ ಆಸ್ಪತ್ರೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಈ ಆಸ್ಪತ್ರೆಗೆ ಅವಶ್ಯವಾಗಿ ಬೇಕಾದ MBBS ವೈದ್ಯರಿಲ್ಲ, ಪ್ರತ್ಯೇಕ ಟಿಸಿ ಇಲ್ಲ, ಶುದ್ಧ ಕುಡಿಯುವ ನೀರಿಲ್ಲ, ಹಾಗೆಯೇ ಆಸ್ಪತ್ರೆ ಕೂಡ 30 ವರ್ಷದ ಹಳೆಯ ಕಟ್ಟಡವಾಗಿದ್ದು, ಶಿಥಿಲಾವಸ್ಥೆಯ ಹಂತ ತಲುಪಿದೆ. ಅದಲ್ಲದೇ ಪ್ರಸ್ತುತ ಮೂರು ದಿನಗಳಿಂದ ವಿದ್ಯುತ್ ಇಲ್ಲದ ಕಾರಣಕ್ಕಾಗಿ ಕೆಲ ಔಷಧಿಗಳು ಕೂಡ ಹಾಳಾಗುವ ಸಾಧ್ಯತೆ ಇದೆ. ಹಾಗಾಗಿ ಆರೋಗ್ಯ ಇಲಾಖೆಯ ಮೇಲಾಧಿಕಾರಿಗಳು ಶಿಘ್ರವೇ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ಸಮಸ್ಯೆಗಳಿಗೆ ಮುಕ್ತಿ ನೀಡಬೇಕೆಂದು ಗ್ರಾಮದ ಸಾರ್ವಜನಿಕರ ಒತ್ತಾಸೆಯಾಗಿದೆ.

ವರದಿ- ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment