ಆತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಪ್ರತಿಭಟನೆ….!

ಸಿಂಧನೂರು: ನಗರದ ಪ್ರವಾಸಿ ಮಂದಿರದಿಂದ ಕಲ್ಯಾಣ ಕರ್ನಾಟಕ ಕರಾಟೆ ಶಿಕ್ಷಕರ ಸಂಘ ತಾಲೂಕು ಸಮಿತಿ ವತಿಯಿಂದ ಉತ್ತರ ಪ್ರದೇಶ ಹತ್ರಾಸ್ ನಲ್ಲಿ 19 ವರ್ಷದ ಯುವತಿ ಮನಿಷಾ ವಾಲ್ಮೀಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಲು ಆಗ್ರಹಿಸಿ ತಹಶಿಲ್ದಾರ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿದರು. ಈ ಪ್ರತಿಭಟನೆ ಮೆರವಣಿಗೆ ಉದ್ದಕ್ಕೂ ಕೇಂದ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿಯ ವಿರುದ್ಧ ಘೋಷಣೆ ಕೂಗಿದರು. ಪ್ರತಿಭಟನಾಕಾರರನ್ನು ಉದ್ದೇಶಿಸಿ ಕುಮಾರಿ ಪೂಜಾ ಮಾತನಾಡಿ ದೇಶದಲ್ಲಿ ದಿನನಿತ್ಯ ಹೆಣ್ಣಿನ ಮೇಲೆ ಶೋಷಣೆ, ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತದೆ.ಕಳೆದ ಕೆಲವು ದಿನಗಳಿಂದ ಉತ್ತರ ಪ್ರದೇಶದ ಹತ್ರಾಸ್ ನಲ್ಲಿ 19 ವರ್ಷದ ಯುವಕಿ ಮನಿಷಾ ವಾಲ್ಮೀಕಿ ಮೇಲೆ ಸಾಮೂಹಿಕ ಅತ್ಯಾಚಾರ ಮಾಡಿ ಬರ್ಬವಾಗಿ ಹತ್ಯೆಗೈದ್ದು ಶವವನ್ನು ಕುಟುಂಬಕ್ಕೂ ಹಸ್ತಾಂತರ ಮಾಡದೇ ಸುಟ್ಟ ಹಾಕಲಾಗಿದೆ. ಸಾಂತ್ವನ ಹೇಳಲು ಹೋದ ರಾಷ್ಟ್ರ ನಾಯಕರ ಮೇಲೆ ಸಹಾ ದೌರ್ಜನ್ಯವನ್ನು ಸರಕಾರ ನಡೆಸಿದ್ದು. ಕೂಡಲೇ ಅತ್ಯಾಚಾರ ಮಾಡಿದ ಎಲ್ಲಾ ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು. ಕುಮಾರಿ ಶಿವಾನಿ ಮಾತನಾಡಿ ತಹಶಿಲ್ದಾರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂಧರ್ಬದಲ್ಲಿ ಜಿಲ್ಲಾಧ್ಯಕ್ಷ ಹುಸೇನಪ್ಪ ಸೂಲಂಗಿ,ಸುರೇಶ್ ಕಟ್ಟಿಮನಿ,ಸಾಬಣ್ಣ ಭೂಪನವರ,ಕಲ್ಯಾಣ ಕುಮಾರ್,ರಜಾಕ್ ಜಹಗೀರದಾರ್,ಸದ್ದಾಂ ಹುಸೇನ್, ಎಮ್.ಶಂಕರ್, ಖಾಸಿಮ್ ಸಾಬ್,ನಾಗರಾಜ, ಇಬ್ರಾಹಿಂ, ಸೇರಿದಂತೆ ಅನೇಕರು ಭಾಗವಹಿಸಿದರು.

ವರದಿ-ಸೈಯದ್ ಬಂಧೇನವಾಜ್ ಎಕ್ಸ್ ಪ್ರೆಸ್ ಟಿವಿ ಸಿಂಧನೂರು

Please follow and like us:

Related posts

Leave a Comment