ವೀರಶೈವ ಸಮುದಾಯಕ್ಕೆ ಅನ್ಯಾಯ ಖಂಡನೀಯ : ಪುಟ್ಟಬುದ್ದಿ

ಮಳವಳ್ಳಿ : ವೀರಶೈವ ಸಮುದಾಯದ ಜಿ ಪಂ ಮಾಜಿ ಸದಸ್ಯೆ ಸುಧಾ ಚಂದ್ರಶೇಖರ್ ಅವರನ್ನು ಅಂದು ಮಂಡ್ಯ ಜಿಲ್ಲಾ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆ ಮಾಡುವ ಮೂಲಕ ಜೆಡಿಎಸ್ ಈ ಸಮುದಾಯಕ್ಕೆ ರಾಜಕೀಯ ಅಧಿಕಾರದ ಕೊಡುಗೆ ಅನನ್ಯವಾದುದು ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಪುಟ್ಟಬುದ್ಧಿ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ 30 ರಂದು ನಡೆದ ಟಿ ಎ ಪಿ ಸಿ ಎಂ ಎಸ್ ಚುನಾವಣೆಯಲ್ಲಿ ನಮ್ಮ ಸಮುದಾಯದ ಕನ್ನಹಳ್ಳಿ ಸುಂದ್ರಪ್ಪರವರಿಗೆ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ನಿಲ್ಲಿಸಿ, ಅಂತಿಮ ಕ್ಷಣದಲ್ಲಿ ಬೇರೆಯವರಿಗೆ ಮತ ಹಾಕುವಂತೆ ತಿಳಿಸಿ ಸಮುದಾಯದ ವ್ಯಕ್ತಿ, ಅಧಿಕಾರ ಪಡೆಯದಂತೆ ಮಾಡಿ, ನಮ್ಮ ಸಮುದಾಯಕ್ಕೆ ಮಾಡಿದ ಅಪಮಾನವೆಂದರು. ಜೆಡಿಎಸ್ ಮುಖಂಡ ಸದಾಶಿವ ದೊಡ್ಡಬುವಳ್ಳಿ ಮಾತನಾಡಿ, ಹಾಲಿ ಜಿ.ಪಂ ಸದಸ್ಯೆ ಸುಜಾತ ಸುಂದ್ರಪ್ಪ, ಇವರ ಪತಿಗೆ ಅಂತಿಮ ಕ್ಷಣದಲ್ಲಿ ಅಧಿಕಾರ ವಂಚಿತನನ್ನಾಗಿ ಮಾಡಿದುದಕ್ಕೆ,ಸ್ಥಳದಲ್ಲಿ ಅವರ ವೇದನೆ,ಅವರ ಅಳು ಸಮುದಾಯದ ಯಾವ ವ್ಯಕ್ತಿಗೂ ಬಾರದಿರಲಿ ಎಂದ ಅವರು ಆ ಹೆಣ್ಣು ಮಗಳ ನೋವು ಇಂದಲ್ಲ ನಾಳೆ ಅನ್ಯಾಯ ಮಾಡಿದ ಅವರಿಗೆ ಪರಿಣಾಮಕಾರಿಯಾಗಿ ಮುಂದೆ ತೋರುತ್ತದೆ ಎಂದು ಹೇಳಿದರು. ವೀರಶೈವ ಸಮುದಾಯದ ವ್ಯಕ್ತಿಗೆ ಅದ ಅನ್ಯಾಯ ನಾವೆಲ್ಲರೂ ಒಕ್ಕೂರಲಿನಿಂದ ಖಂಡಿಸಬೇಕಾದ ಅನಿವಾರ್ಯತೆ ಇದೆ, ಅದಕ್ಕಾಗಿ ನಾವು ಈ ಸುದ್ದಿಗೋಷ್ಠಿಯ ಮೂಲಕ ಖಂಡನೆ ವ್ಯಕ್ತ ಪಡಿಸುತಿದ್ದು, ನಮ್ಮ ಸಮುದಾಯದ ವ್ಯಕ್ತಿ ಕನ್ನಹಳ್ಳಿ ಸುಂದರ್ ರವರಿಗೆ ನೈತಿಕವಾಗಿ ಅವರಿಗೆ ನಾವೆಲ್ಲರೂ ಬೆಂಬಲ ನೀಡುತ್ತಿದ್ದೇವೆ ಎಂದರು. ಸುದ್ದಿಗೋಷ್ಠಿಯಲ್ಲಿ ಪಿ ಎಲ್ ಡಿ ಬ್ಯಾಂಕ್ ಅಧ್ಯಕ್ಷ ಶಿವಮಲ್ಲಪ್ಪ, ವೀರಶೈವ ತಾಲ್ಲೂಕು ಅಧ್ಯಕ್ಷ ಗುರುಸ್ವಾಮಿ ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment