ಇತಿಹಾಸ ಸೃಷ್ಟಿಸಿದ ಮಹಾನಾಯಕ ಧಾರಾವಾಹಿ – ಸಾಯಿಬಾಬಾ ಅಣಬಿ..!

ಶಹಾಪುರ : ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರ ಜೀವನ ಆಧಾರಿತ ಕುರಿತು ಮಹಾನಾಯಕ ಧಾರಾವಾಹಿ ಇಂದು ದೇಶದಾದ್ಯಂತ ಉತ್ತಮ ಪ್ರಶಂಸೆಗೆ ಪಾತ್ರವಾಗಿ ಇತಿಹಾಸವನ್ನೇ ಸೃಷ್ಟಿಸಿದೆ ಎಂದು ಯುವ ಸಾಹಿತಿ ಸಾಯಿಬಾಬಾ ಅಣಬಿ ಹೇಳಿದರು. ತಾಲ್ಲೂಕಿನ ಮಹಲ ರೋಜಾ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ಅಂಬೇಡ್ಕರ ಅಭಿಮಾನಿ ಬಳಗದ ವತಿಯಿಂದ ಹಮ್ಮಿಕೊಂಡಿರುವ ಮಹಾನಾಯಕ ಧಾರಾವಾಹಿ ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಚಿಕ್ಕವಯಸ್ಸಿನಲ್ಲೆ ಅವರಿಗೆ ಇರುವ ಧೈರ್ಯ, ಸಾಹಸ, ವಿದ್ಯೆ, ಪ್ರತಿಭೆ ನಿಜಕ್ಕೂ ಮೆಚ್ಚುವಂಥದ್ದು ಅನ್ಯಾಯದ ವಿರುದ್ಧ ಹೋರಾಡುವ ಮನೋಭಾವನೆಯನ್ನು ಬಾಲ್ಯದಿಂದಲೇ ಬೆಳೆಸಿಕೊಂಡು ಬಂದಿರುವುದನ್ನು ಜೀ ಕನ್ನಡ ವಾಹಿನಿ ಎಳೆಎಳೆಯಾಗಿ ತೋರಿಸುತ್ತಿದೆ ಆದ್ದರಿಂದ ವಾಹಿನಿ ಮುಖ್ಯಸ್ಥರಿಗೆ ಈ ಸಂದರ್ಭದಲ್ಲಿ ಕೃತಜ್ಞತೆಗಳು ಸಲ್ಲಿಸಬೇಕಾಗುತ್ತದೆ ಎಂದು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಮಾನಪ್ಪ ವಟಾರ್,ಹಣಮಂತ ಹೊಸಮನಿ,ಹೊನ್ನಪ್ಪ ಗಂಗನಾಳ,ರಾಜು ಸುರಪುರ, ಶಾಂತಪ್ಪ ಸಾಲಿಮನಿ,ಮರೆಪ್ಪ ಜಾಲಿಬೆಂಚಿ,ರಾಯಪ್ಪ ಸಾಲಿಮನಿ,ಗುರಪ್ಪ ರೋಜಾ,ಮಲ್ಲೇಶಿ ಹೊಸಮನಿ,ನಿಂಗಣ್ಣ ಕರ್ನಾಳ,ಪರಶುರಾಮ ಕಟ್ಟಿಮನಿ,ಮರೆಪ್ಪ ಐಕೂರು, ಲಕ್ಷ್ಮಣ,ಮಲ್ಲಿಕಾರ್ಜುನ್ ಹಾಗೂ ಇತರರು ಉಪಸ್ಥಿತರಿದ್ದರು.ಪರಶುರಾಮ ರೋಜಾ ಕಾರ್ಯಕ್ರಮ ನಿರೂಪಿಸಿದರೆ ಮಲ್ಲು ರಸ್ತಾಪುರ ವಂದಿಸಿದರು.

ವರದಿ-ಬಸವರಾಜ್ ಸಿನ್ನೂರ ಎಕ್ಸ್ ಪ್ರೆಸ್ ಟಿವಿ ಶಹಾಪುರ

Please follow and like us:

Related posts

Leave a Comment