ದ್ವಿಚಕ್ರ ವಾಹನದ ಬಿಡಿಭಾಗದಲ್ಲಿ ಸಿಕ್ತು ಅಫೀಮು..!

ವಿಜಯಪುರ: ವಿಜಯಪುರ ಜಿಲ್ಲೆಯ ಚಡಚಣ ತಾಲ್ಲೂಕಿನ ಶಿರಾಡೊಣ ಗ್ರಾಮದ ಬಳಿ ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಸಾಗುಸುತ್ತಿದ್ದ ಅಫೀಮು ಜೊತೆಗೆ ಕಂಟೈನರ್ ವಾಹನವನ್ನು ಖಚಿತ ಮಾಹಿತಿಯೊಂದಿಗೆ ಅಬಕಾರಿ ಪೋಲಿಸರು ಬಲೆ ಬಿಸಿ ಯಶಸ್ವಿಯಾಗಿದ್ದಾರೆ. ಸುಮಾರು 5 ಲಕ್ಷ ಮೌಲ್ಯದ 12.5 ಕೆಜಿ ಅಫೀಮು , 30 ಲಕ್ಷ ಮೌಲ್ಯದ ಕಂಟೇನರ್ ವಾಹನ ಜಪ್ತಿ ಮಾಡಿದ್ದಾರೆ. ಆರೋಪಿ ರಾಜಸ್ಥಾನ ಮೂಲದ ಸತೀಶ್ ಚೌಧರಿ ಎಂದು ತಿಳಿದು ಬಂದಿದೆ.. ಈತ ರಾಜಸ್ಥಾನದಿಂದ ಬೆಂಗಳೂರಿಗೆ ಕಂಟೇನರ್ ಮೂಲಕ ದ್ವಿಚಕ್ರ ವಾಹನ ಬಿಡಿಭಾಗವನ್ನು ಸಾಗಣೆ ಮಾಡುವ ಜೊತೆಗೆ ಅಫೀಮು ಸಾಗಿಸುತ್ತಿದ್ದ, ಅಬಕಾರಿ ಪೊಲೀಸರು ದಾಳಿ ನಡೆಸಿ, ಅಫೀಮ ಹಾಗೂ ವಾಹನವನ್ನು ಜಪ್ತಿ ಮಾಡಿದ್ದಾರೆ. ಇಂಡಿ ವಲಯ ವ್ಯಾಪ್ತಿಯ ಚಡಚಣ ಠಾಣಾದಲ್ಲಿ ಪ್ರಕರಣ ದಾಖಲಾಗಿದೆ. ಅಬಕಾರಿ ಜಂಟಿ ಆಯುಕ್ತ ಡಾ. ವೈ. ಮಂಜುನಾಥ, ಅಬಕಾರಿ ಉಪ ಆಯುಕ್ತ ಕೆ. ಅರುಣಕುಮಾರ ಮಾರ್ಗದರ್ಶನದಲ್ಲಿ ಅಬಕಾರಿ ಪಿಎಸ್ಐ ಸದಾಶಿವ ಕೊರ್ತಿ ಸೇರಿದಂತೆ ಸಿಬ್ಬಂದಿ ತಂಡ ದಾಳಿ ನಡೆಸಿದೆ.

ವರದಿ-ಶಂಕರ್ ಜಮಾದಾರ ಎಕ್ಸ್ ಪ್ರೆಸ್ ನ್ಯೂಸ್ ಇಂಡಿ

Please follow and like us:

Related posts

Leave a Comment