ಸಿಡಿಮದ್ದನ್ನು ತಿಂದು ಹಸುವಿನ ಬಾಯಿ ಛೀದ್ರ…!

ನಂಜನಗೂಡು: ಕಾಡು ಪ್ರಾಣಿಗಳ ಭೇಟೆಗಾಗಿ ಇರಿಸಲಾಗಿದ್ದ ಸಿಡಿಮದ್ದನ್ನು ಹಸು ತಿಂದಿ ಅಸ್ವಸ್ಥವಾಗಿರುವ ಘಟನೆ ನಂಜನಗೂಡು ತಾಲೂಕಿನ ಅಂಬಳೆ ಗ್ರಾಮದಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ಗ್ರಾಮದ ಹೊರವಲಯದ ಕೆರೆಯ ಸಮೀಪ ಕಾಡು ಹಂದಿಗಳನ್ನು ಭೇಟೆಯಾಡಲು ಸಿಡಿಮದ್ದು ತಯಾರಿಸಿ ಇಡಲಾಗಿತ್ತು. ಆದ್ರೆ ಚಿಕ್ಕನಾಯಕ ಕೆರೆಗೆ ನೀರು ಕುಡಿಯಲೆಂದು ಹಸು ಬಂದಿದ್ದು ಸಿಡಿಮದ್ದನ್ನು ತಿಂದಿದೆ. ಸಿಡಿಮದ್ದು ತಿನ್ನುತ್ತಿದ್ದಂತೆ ಹಸುವಿನ ಬಾಯಿ ಛಿದ್ರವಾಗಿದ್ದು ಹಸುವಿನ ಸ್ಥೀತಿ ಚಿಂತಾಜನಕವಾಗಿದೆ. ಹಸು ಅಂಬಳೆ ಗ್ರಾಮದ ವೆಂಕಟರಾಮು ಎಂಬುವರಿಗೆ ಸೇರಿದ್ದಾಗಿದ್ದು, ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ನಂಜನಗೂಡು ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ನಾಟಿ ಸಿಡಿಮದ್ದಿನ ತಯಾರಕನನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದಾರೆ.

ವರದಿ-ಮೋಹನ್ ಎಕ್ಸ್ ಪ್ರೆಸ್ ಟಿವಿ ನಂಜನಗೂಡು

Please follow and like us:

Related posts

Leave a Comment