ಕೆರೆಯ ನೀರಿನ ಮಧ್ಯದಲ್ಲಿ ಸಿಲುಕಿಕೊಂಡು ವ್ಯಕ್ತಿಗಳು…!

ಮಸ್ಕಿ: ಹಳ್ಳದಲ್ಲಿ ಸ್ನಾನಕ್ಕೆ ತೆರಳಿದ್ದ ಇಬ್ಬರು ವ್ಯಕ್ತಿಗಳು ದಿಢೀರ್ ಹರಿದು ಬಂದ ನೀರಿನಿಂದ ಹಳ್ಳದ ಮದ್ಯದಲ್ಲೇ ಸಿಲುಕಿಕೊಂಡಿರುವ ಘಟನೆ ರಾಯಚೂರು ಜಿಲ್ಲೆಯ ಮಸ್ಕಿಯಲ್ಲಿ ನಡೆದಿದೆ. ರಾಯಚೂರು ಜಿಲ್ಲೆಯ ಮಸ್ಕಿ ಪಟ್ಟಣದ ಹೊರ ವಲಯದಲ್ಲಿನ ಹಳ್ಳಕ್ಕೆ ಮಾರಲ ದಿನ್ನಿ ಡ್ಯಾಂ ನಿಂದ ಏಕಾ ಏಕಿ ನೀರು ಬಿಡಲಾಗಿದೆ. ಇತ್ತ ಪಟ್ಟಣದ ಹೊರ ವಲಯದಲ್ಲಿನ ಹಳ್ಳಕ್ಕೆ ಕೆಲ ನಿವಾಸಿಗಳು ಬೆಳಗಿನ ನಿತ್ಯಕರ್ಮ ಮತ್ತು ಸ್ನಾನಕ್ಕೆಂದು ತೆರಳುತ್ತಾರೆ ಇದೇ ರೀತಿಯಾಗಿ ಇಂದು ಹಳ್ಳಕ್ಕೆ ತೆರಳಿದ್ದ ಇಬ್ಬರು ವ್ಯಕ್ತಿಗಳು ಏಕಾ ಏಕಿ ನೀರು ಹರಿದು ಬಂದ ಹಿನ್ನೆಲೆ ಹಳ್ಳದ ಮಧ್ಯದಲ್ಲಿ ಸಿಲುಕಿದ್ದಾರೆ. ಈ ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಮಸ್ಕಿ ಪೊಲೀಸರು ಆಗಮಿಸಿದ್ದು ಕಾರ್ಯಚರಣೆಗೆ ಮುಂದಾಗಿದ್ದಾರೆ

ವರದಿ-ವೀರೇಶ್ ಅರಮನಿ ಎಕ್ಸ್ಪ್ರೆಸ್ ಟಿವಿ ಲಿಂಗಸೂಗೂರು.

Please follow and like us:

Related posts

Leave a Comment