ಸಾಲಬಾಧೆಗೆ ಹೆದರಿ ರೈತ ಆತ್ಮಹತ್ಯೆ..!

ನಾಗಮಂಗಲ: ಸಾಲ ಬಾದೆಗೆ ಹೆದರಿ ರೈತನೋರ್ವ ನೇಣಿಗೆ ಶರಣಾಗಿರುವ ಘಟನೆ ನಾಗಮಂಗಲ ತಾಲ್ಲೂಕಿನ ಹುರುಳಿ ಗಂಗನಹಳ್ಳಿ ಗ್ರಾಮದಲ್ಲಿ ನಡೆದಿದೆ. ಸುಮಾರು 40 ವರ್ಷದ ಬಿ.ಎನ್ ವೆಂಕಟೇಶ್ ಜಯರಾಮೇಗೌಡ ಎಂಬಾತ ಗ್ರಾಮದ ಹೊರಗಿರುವ ತಮ್ಮ ತೋಟದ ಜಮೀನಿನಲ್ಲಿರುವ ಹುಣಸೇ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ. ಬೆಳಿಗ್ಗೆ ಗ್ರಾಮಸ್ಥರು ಎಂದಿನಂತೆ ಜಮೀನಿನ ಕೆಲಸಕ್ಕೆಂದು ತೆರಳಿದಾಗ ಮರದಲ್ಲಿ ನೇತಾಡುತ್ತಿದ್ದ ವೆಂಕಟೇಶ್ ನ ಮೃತ ದೇಹ ನೋಡಿ ಅವರ ಮನೆಗೆ ವಿಷಯ ಮುಟ್ಟಿಸಲಾಗಿದೆ. ಇನ್ನೂ ಪತ್ನಿ ಮತ್ತು ಇಬ್ಬರು ಗಂಡು ಮಕ್ಕಳನ್ನು ಆಗಲಿರುವ ರೈತ ಬ್ಯಾಂಕು ಮತ್ತು ಇತರೆ ಕೈಸಾಲ ಸೇರಿ ಸುಮಾರು 5 ಲಕ್ಷದ ವರೆಗೆ ಸಾಲಬಾದೆ ಅನುಭವಿಸುತ್ತಿದ್ದರು ಎನ್ನಲಾಗಿದೆ. ಘಟನೆ ಸಂಬಂಧ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಟ್ಟಣದ ಜನರಲ್ ಆಸ್ಪತ್ರೆಯಲ್ಲಿ ಶವದ ಪಂಚನಾಮೆ ನಡೆಸಲಾಗಿದೆ. ಸಂತ್ರಸ್ಥ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ.

ವರದಿ- ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ನಾಗಮಂಗಲ

Please follow and like us:

Related posts

Leave a Comment