ಉತ್ತರಪ್ರದೇಶದ ಆತ್ಯಾಚಾರ ಖಂಡಿಸಿ ಉಗ್ರ ಹೊರಾಟ-ಬ್ರಹ್ಮಾನಂದ ಸ್ವಾಮೀಜಿ..!

ಶ್ರೀನಿವಾಸಪುರ: ಉತ್ತರಪ್ರದೇಶದ ಹತ್ರಾಸ್ ಗ್ರಾಮದಲ್ಲಿ ಮನೀಷಾ ಎಂಬ ಹೆಣ್ಣುಮಗಳ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿ ಶ್ರೀನಿವಾಸಪುರ ತಾಲ್ಲೂಕಿನ ವಾಲ್ಮೀಕಿ ನಾಯಕ ಸ್ವಾಭಿಮಾನಿ ಚಳುವಳಿ ಇಂದ ಪ್ರತಿಭಟನೆಯನ್ನು ನಡೆಸಲಾಯಿತು, ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಬ್ರಹ್ಮಾನಂದ ಸ್ವಾಮಿಜಿ ಮಾತನಾಡಿ ಪೋಲಿಸರು ಹೆಣ್ಣುಮಗಳ ಮೃತದೇಹವನ್ನು ಪೋಷಕರಿಗೆ ನೀಡದೆ ರಾತ್ರೋರಾತ್ರಿ ಸುಟ್ಟು ಹಾಕಿದ್ದಾರೆ, ಪತ್ರಕರ್ತರಿಗೆ ಹಾಗೂ ಮಾಧ್ಯಮದವರಿಗೆ ನಿರ್ಬಂಧ ಹಾಕಲಾಗಿತ್ತು. ಮನೀಷಾ ಕುಟುಂಬಕ್ಕೆ ನ್ಯಾಯ ಒದಗಿಸಿಕೊಡಲು ವಕಾಲತ್ತು ವಹಿಸಲು ಬಂದ ವಕೀಲರಿಗೂ ಗ್ರಾಮಕ್ಕೆ ಬಿಡದೆ ಪೋಲಿಸರ ಸರ್ಪಗಾವಲು ಹಾಕುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ, ಇನ್ನೂ ಮನೀಷಾ ಕುಟುಂಬಕ್ಕೆ ನ್ಯಾಯ ಒದಗಿಸಿ ಕೊಡುವಂತೆ ಪ್ರತಿಭಟಿಸಿ ತಾಲ್ಲೂಕು ದಂಡಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿಯನ್ನು ನೀಡಿದರು, ಸರ್ಕಾರ ನ್ಯಾಯ ಒದಗಿಸದೇ ಇದ್ದಲ್ಲಿ ರಾಜ್ಯ ವ್ಯಾಪಿಯಷ್ಟೇ ಅಲ್ಲದೇ ದೇಶವ್ಯಾಪ್ತಿ ಉಗ್ರವಾದ ಪ್ರತಿಭಟನೆ ಮಾಡಲಾಗುವುದೆಂದು ಬ್ರಹ್ಮಾನಂದ ಸ್ವಾಮೀಜಿ ಗಳು ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ಸಂದೇಶ ನೀಡಿದರು,.

ವರದಿ-ವಿ ರಾಮಕೃಷ್ಣ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Please follow and like us:

Related posts

Leave a Comment