ಶ್ರೀ ವಿಶ್ವಗುರು ಕೋ ಅಪರೇಟಿವ್ ಸೊಸೈಟಿ ವತಿಯಿಂದ ಅಭಿನಂದನಾ ಕಾರ್ಯ..!

ಮಳವಳ್ಳಿ: ಶ್ರೀ ವಿಶ್ವಗುರು ಕೋ ಅಪರೇಟಿವ್ ಸೊಸೈಟಿ ವತಿಯಿಂದ ನೂತನ ತಾ.ಪಂ ಅಧ್ಯಕ್ಷರು ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷರುಗಳು ಹಾಗೂ ನಿರ್ದೇಶಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಮಳವಳ್ಳಿ ಪಟ್ಟಣದಲ್ಲಿ ನಡೆಸಲಾಯಿತು. ಮಳವಳ್ಳಿ ಪಟ್ಟಣದ ಕೋಟೆ ಬೀದಿಯಲ್ಲಿರುವ ವಿಶ್ವಗುರು ಕೋ ಅಪರೇಟಿವ್ ಸೊಸೈಟಿದ ಅಧ್ಯಕ್ಷ ಕೃಷ್ಣಶೆಟ್ಟಿ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲ್ಲೂಕು ಪಂಚಾಯಿತಿ ನೂತನ ಅಧ್ಯಕ್ಷ ಪುಟ್ಟಸ್ವಾಮಿ, ಉಪಾಧ್ಯಕ್ಷ ಮಾಧು, ಟಿಎಪಿಸಿಎಂಎಸ್ ಅಧ್ಯಕ್ಷ ಕುಳ್ಳಚನ್ನಂಕಯ್ಯ , ನಿರ್ದೇಶಕ ಪ್ರಕಾಶ್ ರವರನ್ನು ಸನ್ಮಾನಿಸಲಾಯಿತು. ಇನ್ನೂ ಸನ್ಮಾನ ಸ್ವೀಕರಿಸಿದ ತಾ.ಪಂ ಅಧ್ಯಕ್ಷ ಪುಟ್ಟಸ್ವಾಮಿ ಮಾತನಾಡಿ, ಕೋ ಅಪರೇಟಿವ್ ಸೊಸೈಟಿಗಳು ಒಂದು ಜಾತಿಗೆ ಸೀಮಿತವಾಗಿರದೆ ಜಾತ್ಯತೀತವಾಗಿ ಕಾಣುತ್ತಿರುವ ಸಂಸ್ಥೆ ಮತ್ತಷ್ಟು ಬೆಳೆಯಲಿ ಎಂದರು. ಇನ್ನೂ ಟಿಎಪಿಸಿಎಂಎಸ್ ನೂತನ ಅಧ್ಯಕ್ಷ ಕುಳ್ಳಚನ್ನಂಕಯ್ಯ ಮಾತನಾಡಿ, ಅಧಿಕಾರ ಶಾಶ್ವತವಲ್ಲ ಅಧಿಕಾರ ಬರುತ್ತದೆ ಹೋಗುತ್ತದೆ. ಅಧಿಕಾರವಿದ್ದಾಗ ಅಭಿವೃದ್ಧಿ ಮಾಡಲು ಮುಂದಾಗಬೇಕು ,ಈ ನಿಟ್ಟಿನಲ್ಲಿ ಸೊಸೈಟಿ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು. ಕಾರ್ಯಕ್ರಮದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಹಾಗೂ ಹಾಲಿಸದಸ್ಯ ವಿಶ್ವಾಸ್, ಶ್ರೀ ವಿಶ್ವಗುರು ಕೋ ಅಪರೇಟಿವ್ ಸೊಸೈಟಿ ಅಧ್ಯಕ್ಷ ಕೃಷ್ಣಶೆಟ್ಟಿ, ಗುರುಪ್ರಸಾದ್, ಸಿಇಓ ಲತಾ, ಪೆಟ್ರೋಲ್ ಬಂಕ್ ಡಾ.ಮಹದೇವ, ಮಹೇಶಕುಮಾರ್ , ಮಾಗನೂರುಶಿವಕುಮಾ ರ್, ಸೇರಿದಂತೆ ಮತ್ತಿತ್ತರರು ಉಪಸ್ಥೀತರಿದ್ದರು.

ವರದಿ-ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment