ಗಾಣಗಾಪೂರ ಪಿ.ಡಿ.ಓ. ಗುರುನಾಥ ಹರಿದಾಸ್ ಅಮಾನತು.

ಅಪಜಲಪೂರ ತಾಲೂಕಿನ ದೇವಲಗಾಣಗಾಪೂರದ ಯಾತ್ರಿ ನಿವಾಸದಲ್ಲಿ ಪ್ರಾರಂಬಿಸಿರುವ ಕಾಳಜಿ ಕೇಂದ್ರದಲ್ಲಿನ ಪ್ರವಾಹ ಸಂತ್ರಸ್ತರ ಆರೋಪದ ಮೇರೆಗೆ ಕತ್ಯವ್ಯ ಲೋಪವ್ಯಸಗಿದ ಹಿನ್ನಲೆ ಗ್ರಾಮ ಪಂಚಾಯತಿ ಅಬಿವೃದ್ದಿ ಅಧಿಕಾರಿ ಗುರುನಾಥ ಹರಿದಾಸ್ ಅವರನ್ನು ಜಿಲ್ಲಾಧಿಕಾರಿ ವಿ.ವಿ.ಜ್ಯೋತ್ಸ್ನಾ ಅವರು ಅಮಾನತು ಮಾಡಿ ಆದೇಶ ಹೊರಡಿಸಿದ ಘಟನೆ ನಡೆದಿದೆ.ಜಿಲ್ಲಾಧಿಕಾರಿಗಳು ಕಾಳಜಿ ಕೇಂದ್ರಕ್ಕೆ ಬೇಟಿ ನಿಡಿದಾಗ ಸಂತ್ರಸ್ತರು ಅಲ್ಲಿಯ ಅವ್ಯವಸ್ಥೆ ಬಗ್ಗೆ ದೂರು ನಿಡಿದ್ದು, ಸರಿಯಾಗಿ ಊಟ ಹಾಕುವದಿಲ್ಲ ,ರೇಷನ್ ಅನ್ನದಲ್ಲಿ ಹಾಗು ನೀರಿನಲ್ಲಿ ಹುಳವಿದೆ ನಾವು ಹ್ಯಾಂಗ್ ಊಟಾ ಮಾಡಬೇಕ್ರೀ ಮೇಡಂ ಎಂದು ಸಂತ್ರಸ್ತರು ನೇರವಾಗಿ ಜಿಲ್ಲಾ ಧಿಕಾರಿಗಳ ಮುಂದೆ ತಮ್ಮ ಗೋಳವನ್ನು ತೋಡಿಕೊಂಡಾಗ ಸ್ಥಳದಲ್ಲಿಯೇ ಸಂತ್ರಸ್ತರ ಸಮ್ಯಸೆಗಳನ್ನು ಅರಿತು ಜಿಲ್ಲಾಧಿಕಾರಿ ಗಾಣಗಾಪೂರ ಗ್ರಾ.ಪಂ.ಪಿಡಿ.ಓ.ಅವರನು ತರಾಟೆ ತೆಗೆದುಕೋಂಡು ಸಸ್ಪೆಂಡ್ ಮಾಡಿದ್ದಾರೆ.ಸಂಸಂದರಾದ ಉಮೇಶ ಜಾಧವ, ಮಾಜಿ ಜಿ.ಪಂ.ಅದ್ಯಕ್ಷ ನಿತಿನ್ ಗುತ್ತೆದಾರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವರದಿ: ಈರಣ್ಣ ವಗ್ಗೆ ಎಕ್ಸ್ ಪ್ರೆಸ್ ಟಿವಿ ಅಫಜಲಪುರ

Please follow and like us:

Related posts

Leave a Comment