ಅಪರಾಧ ಪ್ರಕರಣಗಳು ತಪ್ಪಿಸಲು ಸಿಸಿಟಿವಿ ಅಳವಡಿಕೆಗೆ ಒತ್ತಾಯ- ಪಿಎಸ್ಐ ಮಲ್ಲಪ್ಪ ಮಡ್ಡಿ.

ಮುದ್ದೇಬಿಹಾಳ: ಮುದ್ದೇಬಿಹಾಳ ಹಾಗೂ ನಾಲತವಾಡ ಪಟ್ಟಣದಲ್ಲಿ ಸಾರ್ವಜನಿಕವಾಗಿ ಸಿಸಿ ಕ್ಯಾಮೆರಾ ಅಳವಡಿಸುವುದರಿಂದ ಅಪರಾಧ ತಡೆಗಟ್ಟಲು ಸಾಧ್ಯವಿದೆ ಸಂಘ-ಸಂಸ್ಥೆಗಳು ಪ್ರಮುಖ ವ್ಯಾಪಾರಿ ಸಂಘ-ಸಂಸ್ಥೆಗಳು ಸಹಕಾರ ನೀಡಬೇಕು ಎಂದು ಪಿಎಸ್ಐ ಮಲ್ಲಪ್ಪ ಮಡ್ಡಿ ಮನವಿ ಮಾಡಿದ್ದಾರೆ. ಸಿಸಿಟಿವಿ ಅಳವಡಿಕೆಗೆ ವೆಚ್ಚವನ್ನು ವ್ಯಾಪಾರಸ್ಥರು ಗಣ್ಯ ವ್ಯಕ್ತಿಗಳು ನೀಡಲು ಮುಂದಾಗಬೇಕು ಈಗಾಗಲೇ ಹಲವಾರು ಸೂಕ್ಷ್ಮ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಅಳವಡಿಕೆಗೆ ಗುರುತಿಸಲಾಗಿದ್ದು ಈ ಬಗ್ಗೆ ಪರಿಶೀಲನೆ ಕೂಡಾ ಮಾಡಲಾಗಿದೆ ಎಂದರು. ಇನ್ನು ಈ ವೇಳೆ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿ ಎಂ ಆರ್ ದಾಯಿ ಜೆಡಿಎಸ್ ಪಕ್ಷದ ಮುಖಂಡ ಶಂಕರ ರಾವ್ ದೇಶಮುಖ್ ಕೆಆರ್ ಎತ್ತಿನಮನಿ ಬಸಣ್ಣ ವಡಗೇರಿ ಗುರುನಾಥ್ ಡಿಗ್ಗಿ ಶ್ರೀಕಾಂತ್ ಹಿರೇಮಠ್ ಶರಣಗೌಡ ಪಾಟೀಲ್ ಹಾಗೂ ಹಲವಾರು ಗಣ್ಯರು ಉಪಸ್ಥಿತರಿದ್ದರು.

ವರದಿ-ಅಮೀನ್ ಮುಲ್ಲಾ ಎಕ್ಸ್ ಪ್ರೆಸ್ ಟಿವಿ ಮುದ್ದೇಬಿಹಾಳ

Please follow and like us:

Related posts

Leave a Comment