ಆನ್ ಲೈನ್ ನಲ್ಲಿ ನ್ಯಾಯಾಲಯ ಸಂಕೀರ್ಣ ಉದ್ಘಾಟನೆ..!

ನಾಗಮಂಗಲಃ ಮಂಡ್ಯ ಜಿಲ್ಲಾ ನ್ಯಾಯಾಂಗ ಇಲಾಖೆ, ಲೋಕೋಪಯೋಗಿ ಇಲಾಖೆ ಹಾಗೂ ನಾಗಮಂಗಲ ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ನೂತನ ನ್ಯಾಯಾಲಯಗಳ ಸಂಕೀರ್ಣವನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳಾದ ಅಭಯ್ ಶ್ರೀನಿವಾಸ್ ಓಕ್ ರವರು ಆನ್ ಲೈನ್- ವಿದ್ಯುನ್ಮಾನ ಮೂಲಕ ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಹೈಕೋರ್ಟ್ ನ್ಯಾಯಮೂರ್ತಿ ಹಾಗೂ ಮಂಡ್ಯ ಜಿಲ್ಲಾ ಆಡಳಿತಾತ್ಮಕ ನ್ಯಾಯಮೂರ್ತಿ ಶ್ರೀಮತಿ ಕೆ.ಎಸ್.ಮುದಗಲ್ ಅಧ್ಯಕ್ಷೀಯ ಮಾತುಗಳಾಡಿದರು ಹಾಗೂ ಹೈಕೋರ್ಟ್ ನ್ಯಾಯಮೂರ್ತಿಗಳಾದ ಬಿ.ಎಂ.ಶ್ಯಾಮ್ ಪ್ರಸಾದ್ ಆನ್ ಲೈನ್ ಮೂಲಕವೇ ಮಾತನಾಡಿದರು.: ಕಾರ್ಯಕ್ರಮದ ಅಧ್ಯಕ್ಷರ ಮೌಖಿಕ ಆದೇಶದಂತೆ ನ್ಯಾಯಾಂಗ ಇಲಾಖೆಯ ಡಿ ಗ್ರೂಪ್ ನೌಕರರಾದ ಭಾಗ್ಯಮ್ಮ ಹಾಗೂ ದೊಡ್ಡೇಗೌಡ ಅವರು ಶಿಲಾನ್ಯಾಸ ನೆರವೇರಿಸಿದ್ರು. ಈ ವೇಳೆ ಅನೇಕ ಗಣ್ಯರು ಉಪಸ್ಥಿತರಿದ್ದರು

Please follow and like us:

Related posts

Leave a Comment