ಪುರಸಭೆ ಅಧ್ಯಕ್ಷ ಸ್ಥಾನದ ಚುಕ್ಕಾಣಿ ಹಿಡಿಯಲು ರೆಡ್ಡಿ ಮತ್ತು ಸ್ವಾಮಿ ನಡುವೆ ಜಿದ್ದಾಜಿದ್ದಿ..!

ಶ್ರೀನಿವಾಸಪುರ ಪುರಸಭೆ ಚುನಾವಣೆ ಇಂದು ನಡೆಯುತ್ತಿದ್ದು ಅಧ್ಯಕ್ಷರ ಸ್ಥಾನದ ಚುಕ್ಕಾಣಿ ಹಿಡಿಯಲು ಕಾಂಗ್ರೆಸ್ ಹಾಲಿ ಶಾಸಕರಾದ ಕೆಆರ್ ರಮೇಶ್ ಕುಮಾರ್ ಹಾಗೂ ಮಾಜಿ ಶಾಸಕರಾದ ಜಿ ಕೆ ವೆಂಕಟಶಿವಾರೆಡ್ಡಿ ನಡುವೆ ಜಿದ್ದಾ ಜಿದ್ದಿನ ಸೆಣಸಾಟ ನಡೆಯುತ್ತಿದೆ. 2019 ರಲ್ಲಿ ನಡೆದ ಪುರಸಭೆ ಸದಸ್ಯರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಪುರಸಭೆಯ ಸದಸ್ಯರಾಗಿ 8 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಜೆಡಿಎಸ್ ಪಕ್ಷದಿಂದ 11 ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ,ಪಕ್ಷೇತರ ಅಭ್ಯರ್ಥಿಗಳಾಗಿ 4 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಪಕ್ಷೇತರ ಅಭ್ಯರ್ಥಿಗಳಪೈಕಿ 3 ಅಭ್ಯರ್ಥಿಗಳು ಕಾಂಗ್ರೆಸ್ ಪಕ್ಷದ ಬೆಂಬಲಿತ ಅಭ್ಯರ್ಥಿಗಳಾಗಿದ್ದು ಇನ್ನೊಬ್ಬ ಪಕ್ಷೇತರ ಅಭ್ಯರ್ಥಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿದ್ದಾರೆ ಇದರಂತೆ ಕಾಂಗ್ರೆಸ್ 11 ಜೆಡಿಎಸ್ 12 ಸದಸ್ಯರ ಬಲ ಹೊಂದಿದ್ದು ಹಾಲಿ ಶಾಸಕರ ಮತ ಸೇರಿ ಕಾಂಗ್ರೆಸ್ 12 ಹಾಗೂ ಜೆಡಿಎಸ್ 12 ಸಮಬಲ ಹೊಂದಿವೆ, ಈಗ ಬಿಜೆಪಿ ಪಕ್ಷದಿಂದ ಆಯ್ಕೆಯಾದ ಲೋಕಸಭಾ ಸದಸ್ಯರಾದ ಎಸ್ ಮುನಿಸ್ವಾಮಿಯವರು ಯಾರಿಗೆ ಮತ ನೀಡುತ್ತಾರೆ ಎಂಬುದನ್ನು ಕುತೂಹಲಕಾರಿಯಾಗಿದೆ. ಇಂದು ಶ್ರೀನಿವಾಸಪುರ ಪುರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಗೆದ್ದು ಅಧಿಕಾರದ ಚುಕ್ಕಾಣಿ ಯಾರು ಹಿಡಿಯುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.

ವರದಿ- ರಾಮ್ ಚರಣ್ ಎಕ್ಸ್ ಪ್ರೆಸ್ ಟಿವಿ ಶ್ರೀನಿವಾಸಪುರ

Please follow and like us:

Related posts

Leave a Comment