ತೇರದಾಳ ಪೊಲೀಸರಿಂದ ಶ್ಲಾಘನೀಯ ಕಾರ್ಯ !

ಕಳೆದ ನವೆಂಬರ್ 1ರಂದು ರಾತ್ರಿ ರಬಕವಿಯ ವಿದ್ಯಾನಗರದಲ್ಲಿರುವ ಮಾಜಿ ಸಚಿವೆ ಶ್ರೀಮತಿ ಉಮಾಶ್ರೀ ಅವರ ಮನೆಗೆ ಕೀಲಿ ಹಾಕಿದ್ದನ್ನು ಗಮನಿಸಿದ್ದ ಕಳ್ಳರು, ಮನೆಯ ಕೀಲಿ ಮುರಿದು,ಮನೆಯಲ್ಲಿದ್ದ ಅಲ್ಮೇರಾದಿಂದ ಎರಡು ಲಕ್ಷ ರೂಪಾಯಿ ನಗದು ಹಣವನ್ನು ಅಪಹರಿಸಿದ್ದರು. ದೂರಿನ ಆಧಾರದ ಮೇಲೆ ತೇರದಾಳ ಪೊಲೀಸ್ ಠಾಣೆಯ ಪಿ.ಎಸ್. ಐ. ವಿಜಯ ಕಾಂಬಳೆಯವರು ಈ ಕಳುವಿನ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ , ತಮ್ಮ ಮೇಲಾಧಿಕಾರಿಗಳಾದ ಡಿ.ವೈ.ಎಸ್.ಪಿ. ಪಾಂಡುರಂಗ , ಬನಹಟ್ಟಿ ಸಿಪಿಐ ಜೆ.ಕರುಣೇಶಗೌಡ ಅವರ ಮಾರ್ಗದರ್ಶನದಲ್ಲಿ ಶೋಧನೆ ನಡೆಸಿ ‘ಯಲ್ಲಪ್ಪಉರ್ಫರಾಮಾಚಾರಿಗಡ್ಡಿ’ ಮತ್ತು ದುರ್ಗಪ್ಪ ವಾಲ್ಮೀಕಿ ಎಂಬ ಹೆಸರಿನ ಇಬ್ಬರು ಕಳ್ಳರನ್ನು ಅತ್ಯಂತ ಚಾಣಾಕ್ಷತನದಿಂದ ಬಂಧಿಸಿ ಅವರ ಕಡೆಯಿಂದ ನಗದು ಒಂದು ಲಕ್ಷ ತೊಂಭತ್ನಾಲ್ಕು ಸಾವಿರ ರೂಪಾಯಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವರದಿ- ಶ್ಯಾಮ್ ತಳವಾರ ಎಕ್ಸ ಪ್ರಸ್ ಟಿವಿ ಜಮಖಂಡಿ..

Please follow and like us:

Related posts

Leave a Comment