ಶಾಸಕರ ಬೌದ್ಧಿಕ ದಿವಾಳಿತನದ ಪ್ರದರ್ಶನವಾಗಿದೆ- ಡಾ.ಪ್ರಕಾಶ್ ಬಾಬುರಾವ್..!

ಬಿಜೆಪಿಯ ಹಿರಿಯ ನಾಯಕ ಉಪ್ಪಾರ ಸಮಾಜದ ಮುಖಂಡ ದಿವಂಗತ ಸಣ್ಣಮೊಗೇಗೌಡರನ್ನು ಶಾಸಕ ಕೆ ಮಹದೇವ್ ನಿಂದಿಸಿರುವುದು ಶಾಸಕರ ಬೌದ್ಧಿಕ ದಿವಾಳಿತನದ ಪ್ರದರ್ಶನವಾಗಿದೆ ಎಂದು ತಾಲ್ಲೂಕು ಬಿಜೆಪಿ ಅಧ್ಯಕ್ಷ ಡಾ ಪ್ರಕಾಶ್ ಬಾಬುರಾವ್ ತಿಳಿಸಿದರು. ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಸಣ್ಣಮೊಗೆಗೌಡರು ಪಕ್ಷದ ಹಿರಿಯರು,ಇವರು 2013 ರಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ,ಮತದಾನದ ದಿನ ಕೆಲವೇ ದಿನಗಳು ಇರುವಾಗ ಅಕಾಲಿಕ ಮರಣ ಹೊಂದಿದರು. ಇವರ ಸಾವಿನ ಬಗ್ಗೆ ಕೆಟ್ಟ ಪದ ಬಳಸಿ ನಿಂದಿಸಿರುವುದು ಅಪರಾಧ ಮಹಾದೇವ್ ಅವರು ಬಹಿರಂಗವಾಗಿ ಕ್ಷಮೇಯಾಚಿಸಬೇಕು ಎಂದರು. ಕೀಳುಮಟ್ಟದ ಅಭಿರುಚಿಯುಳ್ಳ ಕೆ ಮಹದೇವ್ ಮನಸ್ಥಿತಿಯನ್ನು ನಮ್ಮ ಬಿಜೆಪಿ ಪಕ್ಷ ಖಂಡಿಸುತ್ತದೆ. ಉಪ್ಪಾರ ಸಮುದಾಯವು ಶಾಸಕರ ವಿರುದ್ಧ ನವೆಂಬರ್ 11 ರಂದು ಏರ್ಪಡಿಸಿರುವ ಪ್ರತಿಭಟನೆಗೆ ತಾಲ್ಲೂಕು ಬಿಜೆಪಿ ಘಟಕ ಸಂಪೂರ್ಣ ಬೆಂಬಲ ವ್ಯಕ್ತಪಡಿಸುತ್ತದೆ.ಈ ಬಗ್ಗೆ ಶಾಸಕ ಕೆ ಮಹದೇವ್ ಸಾರ್ವಜನಿಕರಲ್ಲಿ ಬಹಿರಂಗವಾಗಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು ಸುದ್ದಿಗೋಷ್ಠಿಯಲ್ಲಿ ತಾಲ್ಲೂಕು ಬಿಜೆಪಿ ಮಾಜಿ ಅಧ್ಯಕ್ಷ ರವಿ , ಎಪಿಎಂಸಿ ನಿರ್ದೇಶಕ ಜಗಪಾಲ,ಪ್ರಧಾನ ಕಾರ್ಯದರ್ಶಿ ವೀರಭದ್ರ ,ವಕೀಲ ಕೃಷ್ಣ ಪ್ರಸಾದ್ ಹಾಜರಿದ್ದರು.

ವರದಿ- ರಾಮೇಗೌಡ ಎಕ್ಸ್ ಪ್ರೆಸ್ ಟಿವಿ ಪಿರಿಯಾಪಟ್ಟಣ

Please follow and like us:

Related posts

Leave a Comment