ಪರಸ್ಪರ ಅವರಿಬ್ಬರ ಪ್ರೀತಿ ಸಾವಿನಲ್ಲಿ ಅಂತ್ಯ..!

ಸಿರವಾರ: ಅದು ತುಂಬಾ ದಿನದ ಹಳೆಯ ಪ್ರೀತಿ ಹುಡುಗ ಮತ್ತು ಹುಡುಗಿ ಅನ್ಯ ಜಾತಿಗೆ ಸೇರಿದವರು. ಪರಸ್ಪರ ಅವರಿಬ್ಬರ ಪ್ರೀತಿ ಅಂತ್ಯ ಕಂಡಿದ್ದು ಮಾತ್ರ ಸಾವಿನಲ್ಲಿ. ಇಂಥದೊಂದು ಘಟನೆ ನಡೆದಿರುವುದು ರಾಯಚೂರು ಜಿಲ್ಲೆಯ ಸಿರವಾರ ತಾಲ್ಲೂಕಿನ ಮಲ್ಲಟ ಗ್ರಾಮದಲ್ಲಿ. ಗ್ರಾಮದ 20 ವರ್ಷದ ಮಹೇಶ್ ಎಂಬಾತ ಅದೇ ಗ್ರಾಮದ ಯುವತಿ 18 ವರ್ಷದ ಅಕ್ಷತಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು.ಕೆಲ ದಿನಗಳ ಹಿಂದೆ ಅಷ್ಟೇ ಹುಡುಗಿಗೆ ಬೇರೆ ಹುಡುಗನ ಜೊತೆ ಮದುವೆ ನಿಶ್ಚಯವಾಗಿತ್ತು, ಇದರಿಂದ ಮನನೊಂದು ಪ್ರೇಮಿಗಳಿಬ್ಬರು ಗ್ರಾಮದ ಹೊರ ವಲಯದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ನೂ ಸ್ಥಳಕ್ಕೆ ಸಿರವಾರ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Please follow and like us:

Related posts

Leave a Comment