ಕೃಷಿ ಸಮಿತಿ ವತಿಯಿಂದ ರೋಟರಿ ಕೃಷಿಬೆಸುಗೆ ಕಾರ್ಯಕ್ರಮ..!

ಮಳವಳ್ಳಿ: ರೋಟರಿ ಸಂಸ್ಥೆ ಹಾಗೂ ರೋಟರಿ ಅಂತರಾಷ್ಟ್ರೀಯ ಜಿಲ್ಲೆ ಕೃಷಿ ಸಮಿತಿ ವತಿಯಿಂದ ರೋಟರಿ ಕೃಷಿ ಬೆಸುಗೆ ಕಾರ್ಯಕ್ರಮ ಮಳವಳ್ಳಿ ತಾಲ್ಲೂಕಿನ ಉಪ್ಪನಹಳ್ಳಿ ಗ್ರಾಮದ ಜೈನ್ ಫಾರ್ಮ್ ನಲ್ಲಿ ನಡೆಸಲಾಯಿತು. ಕಾರ್ಯಕ್ರಮವನ್ನು ರೋಟರಿ ಜಿಲ್ಲಾ ಪಾಲಕ ಬಿ.ಎಲ್ ನಾಗೇಂದ್ರ ಪ್ರಸಾದ್ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಇಸ್ರೇಲ್ ದೇಶದವರು ಉಚಿತ ಕೃಷಿ ತರಬೇತಿ ನೀಡಲು ಮುಂದಾಗಿದೆ ಇದರಿಂದ ಕೃಷಿರಂಗ. ಮತ್ತಷ್ಟು ಅಭಿವೃದ್ಧಿ ಯಾಗಲಿದೆ ಎಂದರು.ಸರ್ಕಾರಗಳಿಗೆ ರೈತರ ಬೆಲೆ ಗೊತ್ತಿರಲಿಲ್ಲ ಕೋರೋನಾ ಬಂದ ಮೇಲೆ ರೈತರಿಗೆ ಪ್ರಾಮುಖ್ಯತೆ ಏಕೆ ನೀಡಬೇಕು ಎಂದು ಅರ್ಥವಾಗುತ್ತಿದೆ ಎಂದರು.ಇದೇ ವೇಳೆ ಕೃಷಿ ಸಂಬಂಧಿತ ವಸ್ತುಗಳನ್ನು ಪ್ರದರ್ಶನ ಏರ್ಪಡಿಸಲಾಗಿತ್ತು. ಇನ್ನೂ ಮಳವಳ್ಳಿಪಟ್ಟಣ ಪರಿಸರ ಪ್ರೇಮಿ ಸಾಲುಮರನಾಗರಾಜು ಹಾಗೂ ಜಿಲ್ಲೆಯ ಕೃಷಿ ಹಾಗೂ ಇತರ ಕ್ಷೇತ್ರ ಸೇವೆ ಸಲ್ಲಿಸದ್ದ 12 ಮಂದಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಕೃಷಿ ಸಮಿತಿ ಅಧ್ಯಕ್ಷ ಅಕ್ಷಯ್ ಮಲ್ಲಪ್ಪ, ತಾಲ್ಲೂಕು ಕೃಷಿಸಮಿತಿ ಅಧ್ಯಕ್ಷ ಗೌತಮ್ ಚಂದ್, ಪೂರ್ವಜಿಲ್ಲಾ ಪಾಲಕ ನಾಗೇಶ್, ರೋಟರಿ ಅಧ್ಯಕ್ಷ ಮಹಮದ್ ಅಲಿ ಸೇರಿದಂತೆ ಮತ್ತಿತ್ತರರು ಇದ್ದರು.

ವರದಿ- ಎ.ಎನ್ ಲೋಕೇಶ್ ಎಕ್ಸ್ ಪ್ರೆಸ್ ಟಿವಿ ಮಳವಳ್ಳಿ

Please follow and like us:

Related posts

Leave a Comment