ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವನ ಮೂರ್ತಿ ಲೋಕಾರ್ಪಣೆ ..!

ಮೂಡಲಗಿ ಸಮೀಪದ ಹಳ್ಳಿಗಳಲ್ಲೂ ಗ್ರಾಮದ ಮಲ್ಲಿಕಾರ್ಜುನ ದೇವಾಲಯದ ನೂತನ ಮಹಾದ್ವಾರ ಉದ್ಘಾಟಿಸಿ ನಿಮಿತ್ಯವಾಗಿ ಮಹಾಲಕ್ಷೀ ದೇವಸ್ಥಾನದಿಂದ ಕುಂಭ ಮೇಳದೊಂದಿಗೆ ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳ ಮೆರವಣಿಗೆ ಗ್ರಾಮದ ಪ್ರಮುಖ ಓಣಿಯಲ್ಲಿ ಜರುಗಿತು.ನಂತರ ಶ್ರೀಗಳು ಮಹಾದ್ವಾರ ಉದ್ಘಾಟಿಸಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಶಿವನ ಮೂರ್ತಿಯನ್ನು ಲೋಕಾರ್ಪಣೆ ಮಾಡಿ ಶಿವನ ಮೂರ್ತಿಗೆ ಪೂಜೆ ಸಲ್ಲಿಸಿದರು. ಕಾರ್ಯಕ್ರಮದ ಸಾನಿದ್ಯವಹಿಸಿದ ಶ್ರೀಗಳು ಮಾತನಾಡಿ ಕಾಣದೆ ಇರುವ ದೇವರು ಇಲ್ಲ ಅಂತ ಹೇಳೋಕೆ ಅಸಾಧ್ಯ ದೇವರು ನಿರಾಕಾರ ಸ್ವರೂಪಿಯಾಗಿದ್ದಾನೆ ಮನುಷ್ಯ ತಾನು ಯಾವ ರೀತಿಯಾಗಿ ಕಲ್ಪನೆ ಮಾಡಿಕೊಳ್ಳುತ್ತವೆ ಆ ಸ್ವರೂಪದ ಮೂರ್ತಿಯಾಗಿ ದೇವರು ಪ್ರತ್ಯಕ್ಷನಾಗುತ್ತಾನೆ. ಧರ್ಮದಲ್ಲಿ ನಂಬಿಕೆ ಇದ್ದರೆ ದೇವರು ಸದಾ ನಮ್ಮನ್ನ ಕಾಪಾಡುತ್ತಾನೆ ಸಮಾಜದಲ್ಲಿ ಐಕ್ಯತೆ ಸೊದರತೆ ಪರಸ್ಪರ ಸಹಕಾರದ ಗುಣಗಳು ಬೆಳೆಸುತ್ತದೆ ದೈವಬಕ್ತಿ ಮಾನವರನ್ನ ಸನ್ಮಾರ್ಗದತ್ತ ಕೊಂಡೊಯುತ್ತದೆ ನಿತ್ಯ ಎಲ್ಲರೂ ಪೂಜೆ ದ್ಯಾನ ಮಾಡುವುದು ಅಷ್ಟಾವರನ ಪಂಚಾರ್ಯಗಳ ಆಶಯದಂತೆ ಬದುಕು ಸಾಗಿಸಬೇಕು ಗುರುವಿನಲ್ಲಿ ಅದಮ್ಯ ಭಕ್ತಿ ನಿಷ್ಟೆ ಬೆಳಸಿ ಕೊಳ್ಳಬೇಕು ತಂದೆ ತಾಯಿಯೇ ಕಾಣುವ ದೇವರು ಅವರ ಆಸೆಯೆ ದೇವರ ಸೇವೆ ಎಂದರು.ಇನ್ನು ಗ್ರಾಮದಲ್ಲಿ ಮಹಾದ್ವಾರ ಮತ್ತು ಶಿವನ ಮೂರ್ತಿ ಪ್ರತಿಷ್ಠಾಪನೆ ಮಾಡಿ ಗ್ರಾಮದ ಏಳಿಗೆಗಾಗಿ ಹಾಗೂ ದೇವಸ್ಥಾನದ ಬೆಳವಣಿಗೆಗಾಗಿ ದೇವಸ್ಥಾನದ ಕಮೀಟಿಯವರು ಕೆಲಸಕ್ಕೆ ಶ್ಲಾಘನೀಯ ಎಂದರು. ಕಾರ್ಯಕ್ರಮದಲ್ಲಿ ಗ್ರಾಮದ ಜನಪ್ರತಿನಿಧಿಗಳು ಹಾಗೂ ರಾಜಕೀಯ ಮುಖಂಡರು ಮತ್ತು ಬೇರೆ ಬೇರೆ ಹಳ್ಳಿಗಳಿಂದ ಭಕ್ತಾದಿಗಳು ಹಾಗೂ ದೇವಸ್ಥಾನದ ಕಮೀಟಿ ಸದಸ್ಯರು ಗ್ರಾಮದ ಸಮಸ್ತ ಜನತೆ ಉಪಸ್ಥಿತರಿದ್ದರು.

ವರದಿ- ಶಂಕರ ಭಜಂತ್ರಿ ಎಕ್ಸ್ಪ್ರೆಸ್ ಟಿವಿ ಮೂಡಲಗಿ

Please follow and like us:

Related posts

Leave a Comment