ಗೋವಾದಲ್ಲಿ ಕರ್ನಾಟಕದ ಶಾಸಕರ ಮಸ್ತ್ ಮಸ್ತ್ ಡಾನ್ಸ್ …!

ಪಣಜಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಹಾಗೂ ಬಿ.ಕೆ.ಶಿವಕುಮಾರ್ ಪುತ್ರಿ ಡಾ.ಹಿತಾ ಅವರ ಮದುವೆ ಗೋವಾದಲ್ಲಿ ಅದ್ಧೂರಿಯಾಗಿ ನೆರವೇರಿತು. ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್‌ನಲ್ಲಿ ವಿವಾಹ ಸಮಾರಂಭ ಆಯೋಜನೆ ಮಾಡಲಾಗಿದ್ದು, ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ ಜೊತೆ ಡಾ.ಹಿತಾ ವಿವಾಹ ಸಮಾರಂಭಕ್ಕೆ ಅನೇಕ ರಾಜಕೀಯ ಗಣ್ಯರು ಆಗಮಿಸಿ, ನೂತನ ವಧು-ವರರಿಗೆ ಶುಭ ಕೋರಿದರು. ಭದ್ರಾವತಿ ಕ್ಷೇತ್ರದ ಶಾಸಕ ಬಿ.ಕೆ. ಸಂಗಮೇಶ್, ಗೋವಾದಲ್ಲಿ ಬೀಡು ಬಿಟ್ಟಿದ್ದು, ಯುವತಿಯೊಂದಿಗೆ ಮಸ್ತ್ ಮಸ್ತ್ ಡಾನ್ಸ್ ಮಾಡಿ ಎಂಜಾಯ್ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರನ ವಿವಾಹ ಗೋವಾದ ಲೀಲಾ ಪ್ಯಾಲೇಸ್ ರೆಸಾರ್ಟ್‌ನಲ್ಲಿ ಅದ್ಧೂರಿಯಾಗಿ ನಡೆದಿದ್ದು, ವಿವಾಹ ಸಮಾರಂಭದಲ್ಲಿ ಭಾಗಿಯಾದ ಶಾಸಕ ಯುವತಿಯೊಂದಿಗೆ ಕೈ ಕೈ ಹಿಡಿದು ಸ್ಟೆಪ್ ಹಾಕಿದ್ದು, ಇಟ್ಸ್ ದ ಟೈಮ್ ಟು ಡಿಸ್ಕೋ…ಹಾಡಿಗೆ ಭರ್ಜರಿಯಾಗಿ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದ್ದಾರೆ.

ವರದಿ-ನ್ಯೂಸ್ ಡೆಸ್ಕ್ ಎಕ್ಸ್ ಪ್ರೆಸ್ ಟಿವಿ ಬೆಂಗಳೂರು

Please follow and like us:

Related posts

Leave a Comment